ಕರ್ನಾಟಕ ಜಾನಪದ ಅಕಾಡೆಮಿಯು ೨೦೧೧ ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡಿರುವ ಜಾನಪದ ಪದ್ಯ, ಜಾನಪದ ಗದ್ಯ, ಜಾನಪದ ವಿಚಾರ ವಿಮರ್ಶೆ ಸಂಶೋಧನೆ, ಜಾನಪದ ಸಂಕೀರ್ಣ ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.
೨೦೧೧ ರ ಜನವರಿ ೦೧ ರಿಂದ ೨೦೧೧ ರ ಡಿಸೆಂಬರ್ ೩೧ ರವರೆಗೆ ಪ್ರಥಮವಾಗಿ ಮುದ್ರಣಗೊಂಡಿರುವ ಜಾನಪದ ಪ್ರಕಾರದ ಕೃತಿಗಳನ್ನು ಬಹುಮಾನ ಯೋಜನೆಗಾಗಿ ಕಳುಹಿಸಬಹುದಾಗಿದ್ದು, ಲೇಖಕರು/ಪ್ರಕಾಶಕರು/ಸಂಪಾದಕರು ತಲಾ ಪ್ರಕಾರದ ೦೪ ಪ್ರತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ೨ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- ೫೬೦೦೦೨ ಇವರಿಗೆ ಫೆ. ೧೦ ರ ಒಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂರವಾಣಿ ಸಂ: ೦೮೦- ೨೨೨೧೫೫೦೯ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
0 comments:
Post a Comment