ಕೊಪ್ಪಳ ಜ. ಕೊಪ್ಪಳ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ನಿಮಿತ್ಯ ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ನಿಷೇಧಾಜ್ಞೆಯನ್ನು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಜಾರಿಗೊಳಿಸಿದ್ದಾರೆ.
ತಾಲೂಕಿನ ಗಿಣಿಗೇರಾ, ಅಗಳಕೇರಾ ಮತ್ತು ಕವಲೂರು ಗ್ರಾಮ ಪಂಚಾಯತಿ ಉಪಚುನಾವಣೆ ನಿಮಿತ್ಯ ಜ. ೧೦ ರಂದು ಮತದಾನ ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಜ. ೮ ರಂದು ಬೆಳಿಗ್ಗೆ ೬ ಗಂಟೆಯಿಂದ ಜ. ೧೧ ರಂದು ಬೆಳಿಗ್ಗೆ ೬ ಗಂಟೆಯವರೆಗೆ ಗಿಣಿಗೇರಾ, ಅಗಳಕೇರಾ ಮತ್ತು ಕವಲೂರು ಗ್ರಾಮಗಳಲ್ಲಿ ಮಾತ್ರ ಮದ್ಯಪಾನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ವ್ಯಾಪ್ತಿ ಮತ್ತು ಸಮಯದಲ್ಲಿ ಎಲ್ಲಾ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಲಾಗಿದೆ
0 comments:
Post a Comment
Click to see the code!
To insert emoticon you must added at least one space before the code.