ಕೊಪ್ಪಳ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಯಪಡುವ ಅಗತ್ಯವಿಲ್ಲ ಇದು ವಿದ್ಯಾರ್ಥಿಗಳಿಗೆ ಮಹತ್ತರವಾದ ಘಟ್ಟ. ಮಾನಸಿಕದಿಂದ ಹೊರಬಂದು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು ವಿದ್ಯಾರ್ಥಿಗಳಿಗೆ ಸಮಯ ಶ್ರದ್ದೆ, ಸಹನೆ ಅತಿಮುಖ್ಯವಾಗಿದ್ದು ನಿರಂತರ ಅಬ್ಯಾಸದಿಂದ ಮುಂದೆ ಬರಲು ಸಾದ್ಯವೆಂದು ಜಿಲ್ಲಾ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಬಿ. ಕಲ್ಲೇಶ ಅಭಿಪ್ರಾಯ ಪಟ್ಟರು.
ಅವರಿಂದು ನಗರದ ಮೇಟ್ರಿಕ ಪೂರ್ವ ಬಾಲಕರ ವಸತಿ ನಿಲಯದಲ್ಲಿ ೨೦೧೧-೧೨ ನೇ ಸಾಲಿನ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹತ್ತನೆ ತರಗತಿ ವಿದ್ಯಾಥಿಗಳಿಗಾಗಿ ೪ ದಿನಗಳ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದಿನ ಉಜ್ವಲ ಬವಿಷ್ಯಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಷ್ಟ ಪಟ್ಟು ಅಬ್ಯಾಸ ಮಾಡಿ ಹೆಚ್ಚಿನ ಅಂಕಗಳೊಂದಿಗೆ ಪಾಸಾದಾಗ ಮಾತ್ರ
ಒಳ್ಳೆಯ ವಿದ್ಯಾಲಯಗಳಲ್ಲಿ ಸರಳವಾಗಿ ಪ್ರವೇಶ ದೊರೆಯುತ್ತದೆ. ತಮ್ಮಲ್ಲಿ ಆಗಾಧವಾದ ಶಕ್ತಿ ಇದೆ. ದೃಡ ಸಂಕಲ್ಪದಿಂದ ಓದಿ ನಿವು ಕಲಿಸಿದ ಗುರುಗಳಿಗೆ ಇಲಾಖೆಗೆ ತಂದೆ ತಾಯಿಗಳಿಗೆ ಹೆಸರು ತರಬೇಕು ನಿಮ್ಮ ಉತ್ತಮವಾದ ಬವಿಷ್ಯ ರೂಪಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ತಯಾರಿ ಇಲಾಖೆ ಮಟ್ಟದಲ್ಲಿ ನಡೆಸಲಾಗುವದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರಕರ್ತ ಪರಮಾನಂದ ಯಾಳಗಿ ಮಾತನಾಡಿ ಇಂದಿನ ಸ್ಪದಾತ್ಮಕಯುಗದಲ್ಲಿ ಓದು ಅತ್ಯವಶ್ಯವಾಗಿದು, ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದೆಂಬ ಕಾರಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ತಂದಿದ್ದು ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಶಿಬಿರದಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದು ಒಳ್ಳೆಯ ಅಂಕಗಳೊಂದಿಗೆ ಪಾಸಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ಮುಖ್ಯವಾದದ್ದು ಸೋಮಾರಿತನ ಬಿಟ್ಟು ಸತತ ಪರಿಶ್ರಮದಿಂದ ಅಧ್ಯಾಯನಮಾಡಿ ದೇಶದ ಒಳ್ಳೆ ಪ್ರಜೆಯಾಗಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಶ್ರೀಮತಿ ರಂಗಮ್ಮ ನಳನಿ, ನಾಗನಗೌಡ ಪಾಟೀಲ ಮಂಗಳಪ್ಪ ವಾರ್ಡ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅದ್ಯಕ್ಷತೆಯನ್ನು ವಾರ್ಡನ ಆರ್.ಪಿ.ಸಾರಂಗಮಠ ವಹಿಸಿಮಾತನಾಡಿದರು ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಶೇಖರ ನಾಯಕ, ಶ್ರೀಮತಿ ರಜಿಯಾ ಬೇಗಂ, ಉಷಾ ಮುಜೂಂದಾರ, ಶ್ರೀಪಾದ ಹುಲಕೋಟಿ, ರಾಜೇಶ್ ಅಂಗಡಿ, ಡಿ, ರಾಮಣ್ಣ, ಶ್ರೀಮತಿ ಪ್‌ರತಿಭಾ ಹೆಚ್.ಕೆ, ರಾಮು ರಾಯಚೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ನೇತ್ರಾವತಿ ಮತ್ತು ಸಂಘಡಿಗರಿಂದ ಪ್ರಾರ್ಥನೆ. ಸಂಗಣ್ಣ ಪಟ್ಟಣಶೆಟ್ಟಿ ಸ್ವಾಗತ. ರಮೇಶ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಸಂತ ಗುಡಿಮನಿ ಕೊನೆಯಲ್ಲಿ ವಂದಿಸಿದರು.
0 comments:
Post a Comment