ಕೊಪ್ಪಳ. ಯುವಕರು ಎಚ್ಚರಗೊಂಡರೆ ಭ್ರಷ್ಠಾಚಾರ ಬೆಳೆಯಲಾರದು ಎಂದು ಹಿರೇಸಿಂದೋಗಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಐ.ಎನ್. ಪಾಟೀಲ್ ಅವರು ನುಡಿದರು. ಅವರು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೧೧-೧೨ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಭ್ರಷ್ಠಾಚಾರ ತಡೆಯುವಲ್ಲಿ ಯುವಕರ ಪಾತ್ರ ಎಂಬ ವಿಷಯದ ಮೇಲೆ ಉಪನ್ಯಾಸ ನಿಡುತ್ತಾ ಮಾತನಾಡಿದರು. ಮುಂದುವರೆದು ಯುವಕರು ಜವಾಬ್ದಾರಿ ಹೆಚ್ಚಿದಂತೆ ಭ್ರಷ್ಠಾಚಾರವನ್ನು ತಡೆಯಬಹುದು ಮನುಷ್ಯನ ಭೋಗ, ಶೈಲಿಗಳು ಭ್ರಷ್ಠಾಚಾರಕ್ಕೆ ನಾಂದಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾದ್ಯಾಪಕರಾದ ಬಸುವರಾಜ ಸಸಿಮಠರವರು ಭ್ರಷ್ಠಾಚಾರ ತಡೆಯುವ ಅನೇಕೆ ಯೋಜನೆಗಳಿದ್ದರೂ ಈ ಸಮಸ್ಯೆ ಪೆಡಂಭೂತವಾಗಿ ಬೆಳೆಯುತ್ತಿರುವದು ವಿಷಾದನಿಯ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೊರ್ವ ಅತಿಥಿಗಳಾಗಿ ಗೋಣಿ ಬಸಪ್ಪ ಉಪಸ್ಥಿತರಿದ್ದರು.
ಸೋಮಶೇಖರ ಜಿ. ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ನಿಂಗಜ್ಜ ಹುಳ್ಳಿ ಸ್ವಾಗತಿಸಿದರೆ ಕೊನೆಗೆ ವಿರುಪಾಕ್ಷಿ ಬಿ. ಕೆ. ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಹನುಮೇಶ ಆಗೋಲಿ ನೆರವೇರಿದರು. ಶಿಬಿರದಲ್ಲಿ ೫೦ವಿದ್ಯಾರ್ಥಿಗಳು ಭಾಗವಹಿಸಿದ್ದವು.
0 comments:
Post a Comment