PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ತಲೆಮಾರಿನ ಅಂತರದಲ್ಲಿ ವಿಚಾರಗಳು ಬದಲಾಗುವ, ಬದುಕನ್ನು ನೋಡುವ ರೀತಿ ಬದಲಾಗುತ್ತಾ ಹೋಗುತ್ತದೆ. ಅದಕ್ಕೆ ಸ್ಪಷ್ಟ ಉದಾಹರಣೆ ಇಂದಿನ ಕವಿಸಮಯದಲ್ಲಿ ಹೊಸ ವರ್ಷದ ಕುರಿತು ವಾಚನ ಮಾಡಿದ ಕವನಗಳು.ಕವಿಸಮಯದಿಂದ ಕವಿಸಮಯಕ್ಕೆ ಕವಿಗಳು ಪ್ರಬುದ್ಧರಾಗುತ್ತಿದ್ದಾರೆ. ಸಧ್ಯದ ಸಂದರ್ಭದಲ್ಲಿ ಸಾಹಿತ್ಯದ ಸೂಕ್ಷ್ಮ ಅವಲೋಕನ ಅವಶ್ಯಕ.ಪ್ರಸ್ತುತ ಸಾಹಿತ್ಯ ತೊಳಲಾಟದಲ್ಲಿದೆ, ತೆವಳುತ್ತಿದೆ  ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೮೬ನೇ ಕವಿಸಮಯದಲ್ಲಿ ಮಾತನಾಡುತ್ತಿದ್ದರು. 
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ  ಗುರುರಾಜ ದೇಸಾಯಿ - ಬಲಿ, ಉತ್ತರ,  ಶಿವಪ್ರಸಾದ ಹಾದಿಮನಿ- ಮಡೆಸ್ನಾನ ಮತ್ತು ನಾವು,  ಬಸು ಚೌಡಕಿ- ಹೃದಯ ಕದ್ದವಳು, ವಿಠ್ಠಪ್ಪ ಗೋರಂಟ್ಲಿ- ನೂತನ ವರ್ಷ, ಡಾ.ಬಸವರಾಜ- ಗವಾಯಿಗಳು,  ಇಬ್ರಾಹಿಂ ಬಿನ್ನಾಳ- ಬದುಕು ಬವಣೆ,  ಲಲಿತಾ ಭಾವಿಕಟ್ಟಿ- ಚುಟುಕುಗಳು,  ಪುಷ್ಪಾವತಿ - ನೂತನ ವರ್ಷ, ಪುಷ್ಪಲತಾ ಏಳುಬಾವಿ- ಗಜಲ್, ಶಾಂತಾದೇವಿ ಹಿರೇಮಠ- ಹೊಸ ವರ್ಷ, ಅನಸೂಯಾ ಜಾಗೀರದಾರ- ಪರಿಧಿ, ಎನ್.ಜಡೆಯಪ್ಪ - ಬಾರಿಗೆ, ಕವನಗಳನ್ನು ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ  ಶಶಿಧರ,ಡಾ.ಶಂಕರಯ್ಯ ಅಬ್ಬಿಗೇರಿಮಠ,  ಕೆ.ಸಂಗಟಿ, ಶಿವಾನಂದ ಹೊದ್ಲೂರ ಮತ್ತಿತರರು ಉಪಸ್ಥಿತರಿದ್ದರು.
  ಸ್ವಾಗತವನ್ನು ಶಿವಪ್ರಸಾದ ಹಾದಿಮನಿ,ವಂದನಾರ್ಪಣೆಯನ್ನು  ಎನ್.ಜಡೆಯಪ್ಪ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮವನ್ನು ನಡೆಸಿಕೊಟ್ಟರು. 

Advertisement

0 comments:

Post a Comment

 
Top