ರಜತ ಮಹೋತ್ಸವದ ವಿವರ
ಕೊಪ್ಪಳ ಜ ೫ಅಂಕುರ್ - ಜವಾಹರ ನವೋದಯ ವಿದ್ಯಾಲಯ ಕುಕುನೂರ್, ಜಿ.ಕೊಪ್ಪಳದ ಹಳೇವಿದ್ಯಾರ್ಥಿಗಳ ಸಂಘವು, ನವೋದಯ ವಿದ್ಯಾಲಯ ಕುಕುನೂರ್ ವಿದ್ಯಾಸಂಸ್ಥೆಯ ಸ್ಥಾಪನೆಯ ೨೫ ವರ್ಷಗಳನ್ನು ಯಶಸ್ವಿಯಾಗಿ ಮುಗಿಸುತ್ತಿರುವ ಶುಭ ಸಂಧರ್ಭದಲ್ಲಿ ರಜತ ಮಹೋತ್ಸವ ಸಮಾರಂಭವನ್ನು ೨೦೧೨ರ ಜನೇವರಿ ೦೭ ಮತ್ತು ೦೮ ನೇ ದಿನಾಂಕದಂದು ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ. ಅಂಕುರ್ ಸಂಸ್ಥೆಯು ೨೦೦೯ ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ವಿದ್ಯಾಲಯದಿಂದ ತೇರ್ಗಡೆಯಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೇಯ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಒಳಗೊಂಡಿದೆ. ಈ ಸಂಸ್ಥೆ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಧನ, ಅನಿರೀಕ್ಷಿತ ವೈದ್ಯಕೀಯ ಖರ್ಚು ವೆಚ್ಚ, ರಕ್ತ ಶೇಖರಣಾ ಘಟಕ, ಮುಕ್ತ ನೇತ್ರ ಪರಿಶೀಲನೆ ಮತ್ತು ವೈದ್ಯಕೀಯ ಸಹಾಯ, ಹಾಗೂ ಇನ್ನಿತರ ಹತ್ತು ಹಲವಾರು ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತದೆ. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ತಮ್ಮ ತನು, ಮನ,ಧನದಿಂದ ಒಟ್ಟುಗೂಡಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪರಿಶ್ರಮಿಸಿತ್ತಿದ್ದಾರೆ. ಜನೇವರಿ ೦೭ ಮತ್ತು ೦೮ರಂದು ಜರುಗಲಿರುವ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ, ಹಳೇಯ ಪ್ರಾಂಶುಪಾಲರಿಗೆ, ಶಿಕ್ಷಕ ವೃಂದಕ್ಕೆ, ಆಡಳಿತ ವರ್ಗದವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ದೇ ಸಂಧರ್ಭದಲ್ಲಿ ಅಂಕುರ್ ಸಂಸ್ಥೆಯು ನಡೆದು ಬಂದ ದಾರಿ, ಮುಂದಿರುವ ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಚರ್ಚೆಯನ್ನು ನಡೆಸಲಾಗುವದು ಎಂದು ಸಂಘದ ಅಧ್ಯಕ್ಷರಾಗಿರುವ ಜಿ.ಮಹೇಶ್ ಕುಮಾರ್ ತಿಳಿಸಿದ್ದಾರೆ. ರಜತ ಮಹೋತ್ಸವ ಕಾರ್ಯಕ್ರಮಕ್ಕೆ, ಕೊಪ್ಪಳದ ಶ್ರೀ ಗವಿಮಠದ ಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಶ್ರೀ ಶ್ರೀ ಗವಿಸಿದ್ಧೇಶ್ವರ ಸ್ವಾಮಿಜೀಯವರು, ಹಾಗೂ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದ ಸ್ವಾಮಿಗಳ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಜಾ ಎಸ್. ರಾಜಗೋಪಾಲಾಚಾರ್, ಹಾಗೂ ಶ್ರೀ ಸುಯಮೀಂದ್ರಾಚಾರ್ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳು, ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠ, ಮಂತ್ರಾಲಯ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
0 comments:
Post a Comment