ಮುಖ್ಯ ಅಥಿತಿಗಳಾಗಿ ಆಗಮಿಸಿದ ಕೆ.ಎಂ. ಸೈಯದ ಅಧ್ಯಕ್ಷರು ಸೈಯದ ಪೌಂಡೇಶನ್ ಕೊಪ್ಪಳ ಮಾತನಾಡಿ ರಾಷ್ಟ್ರದಲ್ಲಿ ಭಾವೈಕ್ಯತೆ ಮೂಡಿಸುವುದು ರಾಷ್ಟ್ರ ಪ್ರೇಮ ಬೆಳೆಸುವುದು ಸೇವಾದಳದ ಶಿಕ್ಷಣದಿಂದ ಮಾತ್ರ ಸಾದ್ಯವೆಂದರು. ಎಸ್.ಬಿ.ರಡ್ಡಿ ಕೇಂದ್ರ ಸಮಿತಿ ಸದಸ್ಯರು, ಶ್ರೀಮತಿ ಇಂದಿರಾ ಭಾವಿಕಟ್ಟಿ ನಗರಸಭಾ ಸದಸ್ಯರು ಸೇವಾದಳ ಜಿಲ್ಲಾ ಸಮಿತಿ ಸದಸ್ಯರು. ಶಿವಾನಂದ ಹೊದ್ಲೂರ, ಸುದರ್ಶನರಾವ್ ದೈಹಿಕ ಶಿಕ್ಷಣಾಧಿಖಾರಿಗಳು ಸಾಂದರ್ಬಿಕವಾಗಿ ಮಾತನಾಡಿದರು. ಕಿನ್ನಾಳ ಕುವೆಂಪು ಶಾಲೆ ವಿದ್ಯಾರ್ಥಿಗಳಿಂದ ಸಾರಿ ನೃತ್ಯ, ಬಾಲಕಿಯರ ಸ.ಸಂ.ಪ.ಪೂ ಕಾಲೇಜ ಕೊಪ್ಪಳದ ಮಕ್ಕಳಿಂದ ಲೋಟಸ್ , ಕಾಳಿದಾಸ ಪ್ರೌಢಶಾಲಾ ಮಕ್ಕಳಿಂದ ದ್ವಜ ಕವಾಯತ್, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಂದ ಡಂಬೇಲ್ಸ. ಲೇಜಿಮ್, ಹುಪ್ಸ, ಸಲಕರಣೆ ವ್ಯಾಯಾಮ್, ಯೋಗ ಮುಂತಾದ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸರ್ವಧರ್ಮಿಯ ಪ್ರಾರ್ಥನೆ ಸದಾಶಿವ ಪಾಟೀಲರಿಂದ ನಾಡಗೀತೆ ಜರುಗಿತು. ಬಸನಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹೆಚ್. ಅಬ್ದುಲ್ ಅಜೀಜ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಗಾದಿಲಿಂಗಪ್ಪ ಜಿಲ್ಲಾ ಸಂಘಟಿಕರು, ಪ್ರಾಣೇಶ ಹೆಚ್. ಕೊಪ್ಪಳ, ವೀರಪಾಕ್ಷಪ್ಪ ಬನ್ನಿಗೋಳ ಯಲಬುರ್ಗಾ, ತುಳುಜಾ ನಾರಾಯಣ್ ಗಂಗಾವತಿ, ಧರ್ಮ ಕುಮಾರ ಕಂಬಳಿ ಕುಷ್ಟಗಿ, ಅಧಿನಾಯಕರುಗಳು ಹಾಗೂ ಸಿ. ವಿಶ್ವನಾಥ ತಾಲೂಕಾ ಕಾರ್ಯದರ್ಶಿ, ವಿಠಲ್ ಬೈಲವಾಡ ತಾಲೂಕ ಅಧ್ಯಕ್ಷರು ಚಿದಾನಂದ ವೀರಗಂಟಿ ಭಾಗವಹಿಸಿದ್ದರು. ಶ್ರೀ ಮುಜಗೊಂಡ ದೈಹಿಕ ಶಿಕ್ಷಕರು ನಿರೂಪಿಸಿದರು. ದೇವರ ಮನಿ ದೈಹಿಕ ಶಿಕ್ಷಕರು ವಂದಿಸಿದರು.
Home
»
»Unlabelled
» ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮ, ಭಾರತ್ ಸೇವಾದಳದ ತಾಯಿಬೇರುಗಳು
Advertisement
Subscribe to:
Post Comments (Atom)
0 comments:
Post a Comment