ನಗರದ ಶಾದಿಮಹಲ್ ನಲ್ಲಿ ಕವಿ ಅಂಜುಮ್ ಅಲವಿ ನೆನಪುಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿಂದಿ, ಕನ್ನಡ, ಉರ್ದು ಕವಿಗೋಷ್ಠಿ ನಡೆಯಿತು. ವಿವಿಧ ಕವಿಗಳು ಕವನ ,ಶಾಹಿರಿಗಳ ವಾಚನ ಮಾಡಿದರು. ಅಲ್ಲಮ್ ಶಾರಿಕ ಕೊಪ್ಪಳ , ಅಲ್ಲಮಫ್ರಬು ಬೆಟ್ಟದೂರ ,ಖದೀರ್ ಅಹ್ಮದ್ ಖದೀರ , ಎಸ್.ಹೆಚ್.ಪಾಟೀಲ,ಅನ್ವರ್ ಹುಸೇನ ಅನ್ವರ, ರಜಾ ಅಲಿಕಾನ್ ರಜಾ ತಾಬಿಷ್ ,ಮಹೇಶ ಬಳ್ಳಾರಿ. ಹಸನ್ ಶಾಹ ಖಾನ ತಾಬಿಷ್ ,ಮಹಮ್ಮದ ಅಲಿ ಅಲಿ ಹಿಮಾಯತಿ ,ದಯಾನಂದ ಸಾಳಿಂಕೆ,ಶ್ರೀವಾಸ್ತವ,ಖಾಜಿ ಅಬುಲ್ ಹಸನ್ ,ಮುಂಗೀಲಾಲ್ ,ಮಹಮ್ಮದ ಹುಸೇನ್ ಮಾಸ್ಟರ್, ಸಿರಾಜ್ ಬಿಸರಳ್ಳಿ ಕವನಗಳ ವಾಚನ ಮಾಡಿದರು.
ಖದೀರ್ ಅಹ್ಮದ್ ಖದೀರ್ ರ ನಿರೂಪಣೆ,ಶಾಯಿರಿಗಳು ವಿಶೇಷ ಮೆಚ್ಚುಗೆ ಪಡೆದವು. ಬಹಳ ದಿನಗಳ ನಂತರ ಕೊಪ್ಪಳದಲ್ಲಿ ಮುಶಾಯಿರಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
sarva dharma samanvayate... this is realy a good secularisam...
ReplyDelete