PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜ. ೧೬ : ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ನಿರ್ಣಯದಂತೆ ಹೈದ್ರಾಬಾದ ಕರ್ನಾಟಕದ ಬಿದರ, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಇದೇ ಜ. ೨೪ ರಂದು ಏಕಕಾಲಕ್ಕೆ ಬಂದ್ ಆಚರಿಸಲು ಕರೆ ನೀಡಿದೆ.
ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಂವಿಧಾನದ ೩೭೧ನೇ ಕಲಮಿನ ತಿದ್ದುಪಡೆ ಮಾಡುವುದಾಗಿ ಕೇಂದ್ರ ಸರಕಾರದ ಭರವಸೆ ದೊರಕಿತ್ತು. ಈ ಭಾಗದ ಸಂಸದರು ಹಾಗೂ ಕೇಂದ್ರ ಸಚಿವರು ನಿರ್ಲಕ್ಷತನದಿಂದ ಆಗಬೇಕಾದ ಕೆಸಲ ಆಗುತಿಲ್ಲ. ಮುಂದಿನ ಬಜೆಟ್ ಅಧಿವೇಶನದಲ್ಲಾದರೂ ಕೇಂದ್ರ ಸರಕಾರ ಸಂವಿಧಾನದ ೩೭೧ನೇ ಕಲಮಿಗೆ ತಿದ್ದುಪಡಿ ಮಾಡಿ, ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸೌಲಭ್ಯವೊದಗಿಸಬೇಕೆಂದು ಎಚ್ಚರಿಸಲು ಜನವರಿ ೨೪ ರಂದು ಹೈದರಾಬಾದ ಕರ್ನಾಟಕಾದ್ಯಂತ ಬಂದ್ ನಡೆಯಲಿದೆ.
ಈ ನಿಮಿತ್ಯ ಪೂರ್ವಭಾವಿ ಸಭೆಯನ್ನು ಜ. ೧೮ ರಂದು ಬುಧವಾರ ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾದ ವೈಜನಾಥ ಪಾಟೀಲರ ಅಧ್ಯಕ್ಷತೆಯಲ್ಲಿ ನಗರದ ಸ್ವಾಮಿ ವಿವೇಕಾನಂದ ಶಾಲೆ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ ಕರೆಯಲಾಗಿದೆ.
ಕೊಪ್ಪಳ ಜಿಲ್ಲೆಯ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲ ಪಕ್ಷಗಳ, ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಲ್ಲ ಜನಪ್ರತಿನಿಧಿಗಳು ಈ ಪೂರ್ವಭಾವಿ ಸಭೆಗೆ ಹಾಜರಾಗಲು  ಹೈ.ಕ. ಹೋರಾಟ ಸಮಿತಿ ಪ್ರ. ಕಾರ್ಯದರ್ಶಿ ಅಲ್ಲಮಪ್ರಭು ಬೆಟ್ಟದೂರು, ಅದ್ಯಕ್ಷರಾ ಎಚ್.ಎಸ್. ಪಾಟೀಲ, ಗೌರವಾಧ್ಯಕ್ಷರಾದ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top