ಕೊಪ್ಪಳ : ಭಾರತ ದೇಶವು ಹಲವು ಜಾತಿ, ಧರ್ಮಗಳಿಂದ ಕೂಡಿದ ರಾಷ್ಟ್ರ, ಜಾತ್ಯಾತೀತ ಮನೀಭಾವ ಎಲ್ಲಾ ಭಾರತೀಯರಲ್ಲೂ ಇರಬೇಕು ಆದರೆ ಈ ದೇಶದ ಹಾಗೂ ನಾಡಿನ ಕೆಲ ಕೋಮು ಸಂಘಟನೆಗಳು ರಾಷ್ಟ್ರದಲ್ಲಿನ ಸೌಹಾರ್ದತೆಯನ್ನು ಕದಡುವ ಕೆಲಸಕ್ಕೆ ಕೈ ಹಾಕುತ್ತಿವೆ. ಇಂತವರಿಗೆ ರಾಜ್ಯ ಬಿ.ಜೆ.ಪಿ ನೇತೃತ್ವದ ಸರಕಾರ ಕುಮ್ಮಕು ನೀಡುತ್ತಿದೆ ಎಂದು ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಇವರು ಗಂಭಿರ ಆರೋಪ ಮಾಡಿದ್ದಾರೆ
ಅವರು ಕೊಪ್ಪಳ ಜಿಲ್ಲಾಆಡಳಿತ ಕಛೆರಿಯ ಮುಂದೆ ಯುವ ಕಾಂಗ್ರೇಸನಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯ ನೇತೃತ್ವವನ್ನು ವಹಿಸಿ ಮಾತನಾಡುತ್ತಾ ಇತ್ತಿಚ್ಚಿಗೆ ಬಿಜಾಪೂರ ಜಿಲ್ಲೆಯ ಸಿಂದಗಿ ತಹಶೀಲ್ ಕಛೆರಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿ ಸೌಹಾರ್ದತೆಗೆ ದಕ್ಕೆ ತರಲು ಯತ್ನಿಸಿದ ಕೋಮವಾದಿ ಸಂಘಟನೆಯ ೬ ಜನರನ್ನು ಗಡಿಪಾರು ಮಾಡಬೇಕು.
ಭಾತರವನ್ನು ಜಾತ್ಯಾತೀತ ದೇಶವನ್ನಾಗಿಸಲು ಮಹಾತ್ವಾಂಕ್ಷೆಯನ್ನಿಟ್ಟಿದ್ದ ಮಹಾತ್ಮ ಗಾಂಧಿಯವರನ್ನೆ ಕೊಂದ ನಾಥುರಾಂ ಗೋಡ್ಸೆಯು ಸಹ ಸಂಘ ಪರಿವಾರದಿಂದ ಬಂದ ವ್ಯಕ್ತಿಯಾಗಿದ್ದಾನೆ. ಹುಬ್ಬಳಿಯ ಹೈಕೋರ್ಟನಲ್ಲಿ ಸಂಭವಿಸಿದ ಬಾಂಬ್ ಸ್ಪೋಟ್, ಮಂಗಳೂರ ಚಚ್ ಮೇಲಿನ ದಾಳಿಯಲ್ಲಿ ಶ್ರೀರಾಮ ಸೇನೆಯ ಕೈವಾಡವಿರುದು ಸಾಬೀತಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಮುಂಕುಂದರಾವ್ ಭವಾನಿಮಠ, ಹೆಚ್.ಎಲ್.ಹಿರೇಗೌಡ್ರ, ರಾಘವೆಂದ್ರ ಹಿಟ್ನಾಳ, ಮಾತನಾಡಿ ಸರಕಾರವನ್ನು ಆಗ್ರಹಿಸಿದರು ಪ್ರತಿಭಟನೆಯಲ್ಲಿ ಬ್ಲಾಕ ಕಾಂಗ್ರೇಸ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ವೆಂಕನಗೌಡ್ರ ಹಿರೇಗೌಡ್ರ, ಬಸವರಡ್ಡಿ ಹಳ್ಳಿಕೇರಿ, ಇಂದಿರಾ ಭಾವಿಕಟ್ಟಿ, ಸಾವಿತ್ರಿ ಮುಜುಂದಾರ, ಜಾಖೀರಹುಸೆನ್ ಖಿಲ್ಲೇದಾರ, ಕಾಟನ್ ಪಾಷ್, ಮಾನ್ವಿಪಾಷ್, ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಯುವ ಕಾಂಗ್ರೇಸ್ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದರು ಅಕ್ಬರಪಾಷ್ ಪಲ್ಟನ್ ಕಾರ್ಯಕ್ರಮವನ್ನು ನಿರೂಪಿಸಿದರು, ಸುರೇಶರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
0 comments:
Post a Comment