PLEASE LOGIN TO KANNADANET.COM FOR REGULAR NEWS-UPDATES


 ದಾವಣಗೆರೆ: ಉಡುಪಿಯ ಅಷ್ಟ ಮಠಗಳಲ್ಲಿನ ಊಟದ ಪಂಕ್ತಿಭೇದ ಮತ್ತು ಜಾತಿಭೇದ ಆಚರಣೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ  (ಮಾರ್ಕ್ಸ್‌ವಾದಿ) ಜ. 26ರಂದು ಉಡುಪಿಯ ಶ್ರೀಕೃಷ್ಣ ದೇವಾಲಯದ ಮುಂದೆ  ಪ್ರತಿಭಟನೆ ನಡೆಸಲಿದೆ.

ಭಾರತದ ಸಂವಿಧಾನ ದೇಶದ ಎಲ್ಲ ಪ್ರಜೆಗಳು ಜಾತಿ, ಲಿಂಗ ಮತ್ತು ಮತಭೇದವಿಲ್ಲದೇ ಎಲ್ಲರೂ ಸಮಾನರೆಂದು ಸಾರಿ 63ವರ್ಷವಾಯಿತು. ಆದರೆ, ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು, ಪಂಕ್ತಿಭೇದ ಆಚರಿಸುತ್ತಲೇ, ಅಸ್ಪೃಶ್ಯತೆಯ ವಿರುದ್ಧ ಮಾತನಾಡಿ, ಹೊರಗೊಂದು ಒಳಗೊಂದು ವರ್ತನೆಯನ್ನು ತೋರಿಸುತ್ತಿದ್ದಾರೆ. ಇದು ಸಂವಿಧಾನ ನಿರ್ದೇಶನದ ಉಲ್ಲಂಘನೆ. ಇದನ್ನು ಸಿಪಿಎಂ ತೀವ್ರವಾಗಿ ಖಂಡಿಸಿ, ಗಣರಾಜ್ಯೋತ್ಸವ ದಿನ  ಪ್ರತಿಭಟನೆಗೆ ಕರೆ ನೀಡಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಾರುತಿ ಮಾನ್ಪಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

0 comments:

Post a Comment

 
Top