PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-06- ತಾಲ್ಲೂಕಿನ  ಮುದ್ದಾಬಳ್ಳಿ ಪ್ರಾಥಮಿಕ  ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ ಯವರು  ವಹಿಸಿದ್ದರು, ಮುಖ್ಯ ಅತಿಥಿಗಳಾದ ನೂತನ ತಾಲ್ಲೂಕ ಪಂಚಾಯಿತಿ ಸದಸ್ಯರಾದ ರಾಜೀವ್ ಭೀಮರಡ್ಡಿ ಮಾದಿನೂರು ರವರು ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಈ ಸಮಯದಲ್ಲಿ ಗ್ರಾಮದ ಯುವಕರಾದ ಹನುಮಗೌಡ ಪಾಟೀಲ,ಬಸವರಾಜ ಆಡೂರು ಉಪಸ್ಥಿತರಿದ್ದರು, ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ ರವರು ಬಾಬು ಜಗಜೀವನ ರಾಮರ ಜೀವನ ಕುರಿತು ಮಾತನಾಡುತ್ತ ಅವರ ಕೊಡುಗೆ ನಮ್ಮ ದೇಶಕ್ಕೆ ಅಪಾರ , ಅವರಲ್ಲಿರುವ ನಾಯಕತ್ವ ಗುಣಗಳನ್ನು  ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು ಮಾರ್ಗದರ್ಶನ ನೀಡಿದರು, ಕಾರ್ಯಕ್ರಮದಲ್ಲಿ ಶಿಕ್ಷಕರಾದ  ಶೋಭಾ ಜಿ, ಮೊಹಮದ್ ಇಸ್ಮಾಯಿಲ್, ರೇಖಾ ಕುಲಕರ್ಣಿ,  ಕವಿತಾ ಕಟ್ಟಿಮನಿ, ವೀರೇಂದ್ರ ಪತ್ತಾರ, ರಾಮಣ್ಣ ವಿ, ರೇಖಾ ಪಾಟೀಲ್, ಸತ್ಯಮ್ಮ ಮುದ್ದಿ, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top