ಕಾಂಗ್ರೆಸ್ ಶಾಸಕರಿಗೆ ವಿಪ್:
ಬೆಂಗಳೂರು, : ವಿಧಾನ ಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಕಾಂಗ್ರೆಸ್, ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ನಾಳೆ ಸಂಜೆ ಸಭೆ ಕರೆದಿರುವ ಕಾಂಗ್ರೆಸ್, ರೆಸಾರ್ಟ್‌ಗೆ ಹೋಗದಿರಲು ನಿರ್ಧರಿಸಿದೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ನಮ್ಮ 71 ಮಂದಿ ಶಾಸಕರು ಪಕ್ಷದ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಪರವೇ ಮತ ಚಲಾಯಿಸಲಿದ್ದಾರೆ. ಯಾರು ಕೂಡಾ ಅಡ್ಡಮತದಾನಕ್ಕೆ ಮುಂದಾಗುವುದಿಲ್ಲ. ಇದು ಕೇವಲ ವದಂತಿ ಎಂದರು.
ಜೆಡಿಎಸ್, ಶ್ರೀರಾಮುಲು, ಪಕ್ಷೇತರರು ನಮ್ಮ ಪರವೇ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಲಿದ್ದಾರೆ ಎಂದ ಅವರು, ವಿಪಕ್ಷಗಳು ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದೆ ಎಂದು ಹೇಳಿದರು.
ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಚಲಾಯಿಸುವ ಭರವಸೆ ನೀಡಿದ್ದಾರೆ. ಜೊತೆಗೆ ನಾಳೆ ನಡೆಯುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ಕೂಡಾ ನೀಡಿದ್ದಾರೆ ಎಂದರು.
ಶ್ರೀರಾಮುಲು ಜೊತೆ ಮಾತನಾಡಿದ್ದು, ಅವರೊಂದಿಗೆ 22 ಮಂದಿ ಶಾಸಕರು ಕೂಡಾ ಇದ್ದಾರೆ. ಅವರು ವಿರೋಧ ಪಕ್ಷದಲ್ಲಿಯೇ ಇರಲು ತೀರ್ಮಾನಿಸಿರುವುದಾಗಿ ತಮ್ಮಾಂದಿಗೆ ಹೇಳಿಕೊಂಡಿದ್ದಾರೆ. ಜೊತೆಗೆ ನಮಗೆ 5 ಮಂದಿ ಪಕ್ಷೇತರರರು ಕೂಡಾ ಸಾಥ್ ನೀಡಲಿರುವುದರಿಂದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ಪರಮೇಶ್ವರ್ ವ್ಯಾಖ್ಯಾನಿಸಿದರು.
ಸಂಜೆ ನಮ್ಮ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಗೆಲುವಿನ ಕುರಿತು ರಣತಂತ್ರ ನಡೆಸಲಾಗುವುದು ಎಂದರು.
ಕಾಂಗ್ರೆಸ್‌ನ 71 ಮಂದಿ ಶಾಸಕರು ನಮ್ಮೆಂದಿಗಿದ್ದಾರೆ. ಅವರ ಮೇಲೆ ವಿಪ್ ಜಾರಿ ಮಾಡಲಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ರೇಸಾರ್ಟ್‌ಗೆ ಕರೆದೊಯ್ಯುವುದಿಲ್ಲ. ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದರು. ಯಡಿಯೂರಪ್ಪ ಕಲ್ಲಡ್ಕದಲ್ಲಿ ನಡೆಸಿರುವ ವಾಜಪೇಯಿ ಯೋಗದ ಕುರಿತು ಮಾತನಾಡಲು ನಿರಾಕರಿಸಿದರು.
0 comments:
Post a Comment