ಕೊಪ್ಪಳ, ಡಿ. ೧೫. ಕೊಪ್ಪಳ ಜಿಲ್ಲೆಯ ಪತ್ರಕರ್ತ ರಮೇಶ ಸುರ್ವೆ ನೇತೃತ್ವದಲ್ಲಿ ಐತಿಹಾಸಿಕ ಅಖಿಲ ಭಾರತ ಪತ್ರಿಕಾ ಸಂಪಾದಕರ ಸಮಾವೇಶ ಡಿಸೆಂಬರ್ ೧೮ ರಿಂದ ೪ ದಿನ ಬೆಂಗಳೂರಿನಲ್ಲಿ ನಡೆಲಿದೆ ಎಂದು ಅಖಿಲ ಭಾರತ ಕಾರ್ಯನಿರ್ವಾಹಕ ಕನ್ನಡ ಪತ್ರಿಕಾ ಸಂಪಾದಕರ ಒಕ್ಕೂಟದ ಗುಲ್ಬರ್ಗಾ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ರಾಜ್ಯ ಹಾಗೂ ದೇಶದ ಕನ್ನಡ ಪತ್ರಿಕೆಗಳ ಸಂಪಾದಕರನ್ನು ಒಗ್ಗೂಡಿಸುವ ದೃಷ್ಟಿಯಿಂದ ಮತ್ತು ಸಣ್ಣ ಹಾಗೂ ಮದ್ಯಮ ಪತ್ರಿಕೆಗಳ ಏಳ್ಗೆಗೆ ಶ್ರಮಿಸಲು ಹಾಗು ಸರ್ಕಾರದಿಂದ ಸಂಪಾದಕರಿಗೆ ಗುರುತಿನ ಪತ್ರ, ನಾನ್ ಮೀಡಿಯಾ ಲಿಸ್ಟ್ ಪತ್ರಿಕೆಗಳಿಗೆ ಜಾಹೀರಾತು, ಸ್ಥಳೀಯ ಓಡಾಟಕ್ಕೆ ಬಸ್ ಪಾಸ್ ಹೀಗೆ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಹೋರಾಟದ ಮೂಲಕ ಸಂಘಟನೆ ಬಲಪಡಿಸಲು ಈ ಸಮಾವೇಶದಲ್ಲಿ ಅಖಿಲ ಭಾರತ ಕಾರ್ಯನಿರ್ವಾಹಕ ಕನ್ನಡ ಪತ್ರಿಕಾ ಸಂಪಾದಕರ ಒಕ್ಕೂಟವನ್ನು ಖ್ಯಾತನಾಮರು ಉದ್ಘಾಟಿಸಲಿದ್ದಾರೆ. ರಾಜ್ಯದ ಜನರಿಗೆ ಪರಿಚಯಿಸಲು, ಪತ್ರಿಕಾ ಇತಿಹಾಸವನ್ನು ತಿಳಿಸಲು ಹಾಗೂ ಸಾಂಸ್ಕೃತಿಕವಾಗಿ ಬೆಳೆಸಲು ಪತ್ರಿಕಾ ಪ್ರದರ್ಶನ, ಪತ್ರಿಕೋದ್ಯಮದ ಕುರಿತು ಗಂಭೀರ ಚರ್ಚೆ, ಮನರಂಜನೆ ಕಾರ್ಯಕ್ರಮ, ವಿವಿಧ ಪ್ರಶಸ್ತಿ ಪ್ರದಾನ ಹೀಗೆ ನಾಲ್ಕು ದಿನ ವೈವಿದ್ಯಮಯ ಕಾರ್ಯಕ್ರಮ ಜರುಗಲಿವೆ.
ಪತ್ರಿಕೋದ್ಯಮದ ಗಣ್ಯರು, ಜನಪ್ರತಿನಿಧಿಗಳು, ಚಲನಚಿತ್ರ, ರಂಗಭೂಮಿ ಕಲಾವಿದರು ಪಾಲ್ಗೊಳ್ಳುವ ಈ ಸಮಾವೇಶದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಶಿಬಿರವನ್ನು ಆಯೋಜಿಸಲಾಗಿದೆ. ಸಮಾವೇಶದ ಸರ್ವಾಧ್ಯಕ್ಷರಾಗಿ ಪುಸ್ತಕ ಮನೆ ಖ್ಯಾತಿಯ ಹರಿಹರಪ್ರಿಯ ಆಯ್ಕೆಯಾಗಿದ್ದಾರೆ. ಪ್ರೊ. ಚಂದ್ರಶೇಖರ ಪಾಟೀಲ, ನಾಗತಿಹಳ್ಳಿ ಚಂದ್ರಶೇಖರ, ಚಲನಚಿತ್ರ ನಟಿ ಶ್ರಿಲಲಿತಾ, ನಿರ್ಮಿತಿ ಕೇಂದ್ರದ ಸಿ. ವಿ. ಚಂದ್ರಶೇಖರ, ಚಲನಚಿತ್ರ ನಟ ಮದನ್ ಪಟೇಲ್ ಮತ್ತು ಶ್ರೀನಿವಾಸಮೂರ್ತಿ ಇತರರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ
0 comments:
Post a Comment