PLEASE LOGIN TO KANNADANET.COM FOR REGULAR NEWS-UPDATES


ವಿಕಲಚೇತನರು ಕೀಳರಿಮೆಯಿಂದ ಹೊರಬರಬೇಕು - ಹನುಮಂತಪ್ಪ ಅಂಡಗಿ 
ಕೊಪ್ಪಳ :  ವಿಕಲಚೇತನರು ಕೀಳರಿಮೆಯಿಂದ ಹೊರಬರಬೇಕು. ಅವರಿಗೆ ಅವಕಾಶ ಬೇಕಾಗಿದೆಯೇ ವಿನ: ಅನುಕಂಪದ ಅಲ್ಲ. ಸಾವಿರಾರು ವರ್ಷಗಳ ಕಾಲ  ಸಾಮಾಜಿಕ ನೀತಿ ರೀತಿಗಳನ್ನು ನಿರ್ದೇಶಿಸಿದ  ಮನುಸ್ಮೃತಿಯು ಕೂಡಾ ವಿಕಲಚೇತನರಿಗೆ ಸಹಪಂಕ್ತಿ ಭೋಜನ, ದೇವ, ಪಿತೃಕಾರ್ಯದಿಂದ ದೂರವಿರಿಸಿತ್ತು.  ಎಲೆಕ್ಟ್ರಾನಿಕ್ಸ ಮತ್ತಿತ್ತರ ಕೆಲ ಉದ್ಯಮಗಳಲ್ಲಿ ವಿಕಲಚೇತನರು ಬೇರೆಯವರಿಗಿಂತ ಉತ್ತಮ ಪ್ರಗತಿ ತೋರಬಲ್ಲರು ಎಂಬುವುದು ವಿಶ್ವದ ಅನೇಕ ರಾಷ್ಟ್ರಗಳ  ಅನುಭವಕ್ಕೆ ಬಂದಿದೆ. ರಾಜ್ಯ ಸರಕಾರವು ತಾನು ಕೊಳ್ಳುವ ವಸ್ತುಗಳಾದ ಪೈಲುಗಳು, ರಜಿಸ್ಟರ್‌ಗಳು,  ನೋಟ ಪುಸ್ತಕಗಳು, ಇವುಗಳು ಶೇ೯೦% ರಷ್ಟು ವಿಕಲಚೇತನರು ಇರುವ  ಉದ್ಯಮಗಳಿಂದಲೇ  ಪಡೆಯಲು ಸಂಕಲ್ಪ ಮಾಡಿದರೆ ಎಲ್ಲಾ ವಿಕಲಚೇತನರಿಗೆ ಉದ್ಯೋಗ  ನೀಡುವುದು ಸಾಧ್ಯವಾಗುತ್ತದೆ.ಪ್ರಾಂಕ್‌ಲಿನ್ ಡಿ.ರೂಸವೆಲ್ಟ್, ಹೋಮರ್, ಹೆಲೆನ್ ಕೆಲ್ಲರ್, ಡೆಮಾಸ್ತನೀಸ್, ಬೀಥೋವನ್, ಸಿ.ಎನ್.ಜಾನಕಿ, ಪಂಡಿತ ಪುಟ್ಟರಾಜ ಗವಾಯಿಗಳು ವಿಕಲ ಚೇತನರಾದರು  ಜಗತ್ತಿಗೆ ಅದ್ಬುತವಾದ ಕೊಡುಗೆ ನೀಡಿದ್ದಾರೆ  ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಸೋಮುವಾರ  ಕೊಪ್ಪಳದ ಸಾಹಿತ್ಯ ಭವನದಲ್ಲಿ  ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ಇವರು ಹಮ್ಮಿಕೊಂಡ   ಜಿಲ್ಲಾ ಮಟ್ಟದ  ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಡಾ. ಸೀತಾ ಗೂಳಪ್ಪ ಹಲಗೇರಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜ, ಅಂಗವಿಕಲರ ತಂದೆ ತಾಯಿಗಳು ಅಂಗವಿಕಲರ ಸಾಮರ್ಥ್ಯ ಬಗ್ಗೆ  ಹೆಚ್ಚು ವಿಶೇಷ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 
ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘದ  ರಾಜ್ಯಾಧ್ಯಕ್ಷರಾದ ಎಸ್.ರೇಣುಕಾರಾಧ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ,ನೌಕರರ ಪ್ರತಿಬಾರಿ  ವರ್ಗಾವಣೆಯ ಸಮಯದಲ್ಲಿ ಎಲ್ಲಾ ನೌಕರರನ್ನು ವೈಧ್ಯಕೀಯ ಪರೀಕ್ಷೆಗೊಳಪಡಿಸದೇ ಪ್ರತಿಶತ ಕಡಿಮೆ ಇರುವವರನ್ನು ಮಾತ್ರ ಪರೀಕ್ಷೆಗೊಳಪಡಿಸಬೇಕು  ಹಾಗೂ ವರ್ಗಾವಣೆ/ಕೌನ್ಸಲಿಂಗ್  ನಡೆಯುವ ಸ್ಥಳದಲ್ಲಿಯೇ ಪರೀಕ್ಷೆಗೊಳಪಡಿಸಬೇಕು ಎಂದರು.
ಜಿಲ್ಲಾ ಪಂಚಾಯತ ಸದಸ್ಯರಾದ ವನಿತಾ ವೀರಣ್ಣ ಗಡಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮಾನಸಿಕವಾಗಿ ಅಧೈರ್ಯವುಳ್ಳವರೇ ಅಂಗವಿಕಲರು. ಆದ್ದರಿಂದ ಅಂಕವಿಕಲರು ಧೈರ್ಯವಾಗಿ ಮುನ್ನುಗ್ಗಬೇಕು ಎಂದರು.
ಜಿಲ್ಲಾ ಪಂಚಾಯತ ಸದಸ್ಯರಾದ ನಾಗನಗೌಡ್ರ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,  ಅಂಗವಿಕಲರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ ಸದಸ್ಯರಾದ ಟಿ.ಜನಾರ್ಧನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಲಿಯೋಟಾಲ್‌ಸ್ಟಾಯ್  ತನ್ನ ಕುರುಪತನದಿಂದಾಗಿ ಸಾಯುವ ನಿರ್ಧಾರವನ್ನು  ಕೈಬಿಟ್ಟಿದ್ದರಿಂದಲೆ ನಮಗೊಬ್ಬ ತತ್ವಜ್ಞಾನಿ ಸಿಗಲು ಸಾಧ್ಯವಾಯಿತು.
ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಟಿ.ಟಿ.ಗಿರಿಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ. ಅಂಗವಿಕಲರ ಪ್ರಯಾಣ ಭತ್ಯೆ ೪೦೦ ರೂ ಇಂದ ೩೦೦೦ ರೂಪಾಯಿ ಹೆಚ್ಚಿಸಬೇಕು. ಮೇಲಾಧಿಕಾರಿಗಳಿಂದ ಹಾಗೂ ಸಹೋದ್ಯೋಗಿಗಳಿಂದಾಗುವ ಕಿರುಕುಳಕ್ಕೆ ನಿರ್ದಿಷ್ಟ ಕಾನೂನು ರೂಪಿಸಬೇಕೆಂದು ಹೇಳಿದರು. 
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ  ಶಂಭುಲಿಂಗನಗೌಡ ಹಲಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ. ಅಂಗವಿಕಲರಿಗೆ ಅನುಕಂಪದ ಜೊತೆಗೆ ಹಕ್ಕುಗಳನ್ನು ಕೊಡಬೇಕಾಗಿದೆ. ಅಂಗವಿಕಲರ ನೌಕರರಿಗೆ ವರ್ಗಾವಣೆ ಸಂದರ್ಭದಲ್ಲಿ ಪಟ್ಟಣ ಪ್ರದೇಶಗಳಿಗೆ ಸ್ಥಳ ನೀಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಟೇಲಿಂಗಾಚಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ. ಇಲಾಖೆಯು ಸರಕಾರದ ಆದೇಶ ಜೊತೆಗೆ ಅಂಗವಿಕಲರನ್ನು  ಮಾನವೀಯತೆಯಿಂದ ನೋಡಿಕೊಳ್ಳುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಇದೇ ೦೯ ರಿಂದ ಆರಂಭವಾಗುವ ಅಖಿಲ ಭಾರತ  ಸಾಹಿತ್ಯ ಸಮ್ಮೇಳನವನ್ನು ನಾವು ನೀವು ಎಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.
ಸೈಯ್ಯದ ಪೌಂಡೇಶನ್ ಅಧ್ಯಕ್ಷರಾದ ಕೆ.ಎಂ.ಸೈಯ್ಯದ್,  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭು ಕಿಡದಾಳ ಮಾತನಾಡಿದರು.
ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ವೀರನಗೌಡ ಪಾಟೀಲ ಹಲಗೇರಿ,  ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ,  ವಾದಿರಾಜ ಕುಷ್ಟಗಿ,  ಮರ್ದಾನಸಾಬ ಕೊತವಾಲ್, ಅಶೋಕ ಕಟ್ಟಿಮನಿ, ಬಿ.ಎಂ ನಾಗಿರಡ್ಡಿ, ಶಿವು ಜೋಗಿ, ಸುಭಾಷರೆಡ್ಡಿ ಕಿನ್ನಾಳ, ಶ್ರೀನಿವಾಸ.ಯು, ಬಿ.ಭೀಮಪ್ಪ, ಹನುಮಂತಪ್ಪ ಬಸರಿಗಿಡದ, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದ ಭರಮಪ್ಪ ಕಟ್ಟಿಮನಿ,  ಮಹೇಶ ಆರೇರ, ರುದ್ರೇಶ ಮಡಿವಾಳರ, ಸಿದ್ರಾಮಪ್ಪ ಅಮರಾವತಿ, ವಸಂತ ರಾಜೂರ, ದೇವಪ್ಪ ಮುಗಳಿ, ಶ್ರೀನಿವಾಸ ಅಂಗಡಿ, ಶೇಖರಪ್ಪ ಬೆಟಗೇರಿ ಇವರನ್ನು ಸನ್ಮಾನಿಸಲಾಯಿತು.
ಇತ್ತಿಚೆಗೆ ನಿಧನರಾದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ನೇತ್ರಾವತಿ ಮಲ್ಲೇಶಪ್ಪ ಗುಮಗೇರಿ ಇವರ ನಿಧನಕ್ಕೆ  ಒಂದು ನೀಮಿಷ ಮೌನಾಚರಣೆ ಮಾಡಲಾಯಿತು.
ಪ್ರಶಾಂತ.ಆರ್.ಪಾಟೀಲ, ಶ್ರಿಶೈಲ ಬಡಿಗೇರ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘದ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿ ನಿರೂಪಿಸಿದರು.  ಕೊಪ್ಪಳ ತಾಲೂಕಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕೊಪ್ಪಳ ತಾಲೂಕ ಕಾರ್ಯದರ್ಶಿ ವೀರೇಶ ಹುಲ್ಲೂರ ಸ್ವಾಗತಿಸಿದರು. ಜಿಲ್ಲಾ ಕೋಶಾಧ್ಯಕ್ಷರಾದ ಕಾಶಿನಾಥ ಸಿರಿಗೇರಿ ವಂದಿಸಿದರು. 

Advertisement

0 comments:

Post a Comment

 
Top