ಬಳ್ಳಾರಿ, ಡಿ. ೩೦: ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಹೆಸರಾಂತ ರಂಗಭೂಮಿ, ಜಾನಪದ ಕಲಾವಿದ ಬೆಳಗಲ್ ವೀರಣ್ಣ ಅವರನ್ನು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ, ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾ ಘಟಕ ಶನಿವಾರ ಸತ್ಕರಿಸಿ ಗೌರವಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್, ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಬೆಳಗಲ್ ವೀರಣ್ಣ ಅವರು ಬಳ್ಳಾರಿ ಜಿಲ್ಲೆಯ ಹೆಮ್ಮೆ. ಸಾಂಸ್ಕೃತಿಕ ಪರಂಪರೆಯ ಸಂಪದ್ಭರಿತ ಬಳ್ಳಾರಿ ಜಿಲ್ಲೆಗೆ ಕೇಂದ್ರ ಸರಕಾರದ ಅತ್ಯುನ್ನತ ಪದ್ಮ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಡುವ ಸಶಕ್ತರು, ಸಾಧನ ಶೀಲರು ಎಂದು ಗುಣಗಾನ ಮಾಡಿದರು.
ಅರ್ಹ ಸಾಧಕರನ್ನು ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಹಿರಿಯ ಚೇತನ ವೀರಣ್ಣ ಅವರಿಗೆ ದಕ್ಕಿರುವ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರವೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಮಹಾಲಿಂಗಮ್ಮ ಬೆಳಗಲ್ ವೀರಣ್ಣ, ಪುತ್ರ ಬೆಳಗಲ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment