PLEASE LOGIN TO KANNADANET.COM FOR REGULAR NEWS-UPDATES


 ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರದ ವತಿಯಿಂದ ಕೊಪ್ಪಳದಲ್ಲಿ ತಾಳೆ ಬೆಳೆ ಸಪ್ತಾಹ ಆಚರಿಸಲಾಯಿತು.
  ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶರಣಬಸಪ್ಪ ಭೋಗಿ ಮಾತನಾಡಿ ತಾಳೆ ಬೆಳೆಯು ತುಂಬಾ ಲಾಭದಾಯಕ ಉದ್ಯಮವಾಗಿದ್ದು, ಇಲಾಖೆಯಲ್ಲಿ ಇದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.  ಅರಾಳ ಗ್ರಾಮದ ವೀರೇಶ್ ಕುಲಕರ್ಣಿ, ಕಿನ್ನಾಳದ ಹುಸೇನ್ ಸಾಬ್ ಅವರು ಮಾತನಾಡಿ, ಪ್ರತಿಯೊಬ್ಬ ರೈತರೂ ತಮ್ಮ ನೀರಾವರಿ ಜಮೀನಿನಲ್ಲಿ ಶೇ. ೫೦ ಭಾಗದಲ್ಲಿ ತಾಳೆ ಬೆಳೆ ಬೆಳೆಯುವಂತೆ ಸಲಹೆ ನೀಡಿದರು.  ಅಲ್ಲದೆ ತಾಳೆ ಬೆಳೆಯಿಂದ ಬರುವ ಆದಾಯದ ಬಗ್ಗೆ ವಿವರಿಸಿದರು. 
  ಕೊಪ್ಪಳ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು ೫೮ ರೈತರು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಸಹಾಯಕ ತೋಟಗಾರಿಕೆ ಅಧಿಕಾರಿ ದುರ್ಗಾಪ್ರಸಾದ್, ಮೋಹನ್, ರುದ್ರಪ್ಪ, ರಾಘವೇಂದ್ರ ದೇಶಪಾಂಡೆ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಮೂರ್ತಿ ಅವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top