ದ್ರಾಕ್ಷಿ ಬೆಳೆಗೆ ಕಾಂಡ ಕೊರಕದ ಬಾಧೆ ನಿವಾರಣೆಗಾಗಿ ತೋಟಗಾರಿಕೆ ಇಲಾಖೆ ಉಪಯುಕ್ತ ಸಲಹೆಗಳನ್ನು ನೀಡಿದೆ.
ಗಂಗಾವತಿ ತಾಲೂಕಿನ ಸೋಮಸಾಗರ ಗ್ರಾಮ ಸೇರಿದಂತೆ ವಿವಿಧೆಡೆ ದ್ರಾಕ್ಷಿ ಬೆಳೆಗೆ ಕಾಂಡ ಕೊರಕದ ಬಾಧೆ ಕಂಡುಬಂದಿದೆ. ಈ ಋತುವಿನಲ್ಲಿ ಕಾಂಡ ಕೊರೆಯುವ ಹುಳು (sಣem giಡಿಜಟeಡಿ) ಎನ್ನುವ ಕೀಟದ ಬಾಧೆ ಅತಿಯಾಗಿರುವುದು ಕಂಡುಬಂದಿದ್ದು, ಇದರ ನಿಯಂತ್ರಣಕ್ಕಾಗಿ ರೈತರು ನಾನಾ ವಿಧದ ಔಷಧಗಳನ್ನು ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಕೊಪ್ಪಳದ ತೋಟಗಾರಿಕಾ ಮಾಹಿತಿ ಹಾಗೂ ಸಲಹಾ ಕೇಂದ್ರ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಹಾಗೂ ಕೊಪ್ಪಳದ ಕೃಷಿ ವಿಸ್ತರಣಾ ಘಟಕದ ವಿಷಯ ತಜ್ಞರು ಹಾಗೂ ಕೀಟಶಾಸ್ತ್ರ ತಜ್ಞರು ಭೇಟಿ ನೀಡಿದ್ದು, ಕಾಂಡ ಕೊರೆಯುವ ಹುಳುವಿನ ಬಾಧೆ ನಿಯಂತ್ರಣಕ್ಕಾಗಿ ತಜ್ಞರು ಸಲಹೆ ನೀಡಿದ್ದು, ಇದರಲ್ಲಿ ಸಮಗ್ರ ಕೀಟ ನಿರ್ವಹಣೆ ತುಂಬ ಅಗತ್ಯವಾಗಿದೆ. ಮಾಗಿ ಉಳುಮೆ, ತೋಟವನ್ನು ಕಸದಿಂದ ಮುಕ್ತವಾಗಿ ಇಡುವುದು, ಆರೋಗ್ಯವಂತ ಸಸಿಗಳನ್ನೆ ನಾಟಿಗೆ ಬಳಸಬೇಕು. ರಾತ್ರಿ ವೇಳೆ ದೀಪಾಕರ್ಷಣ ಬಲೆಗಳಿಂದ ದುಂಬಿಗಳನ್ನು ಆಕರ್ಷಿಸಿ ನಾಶಗೊಳಿಸುವುದು ಸೂಕ್ತ. ಕೀಟಶಾಸ್ತ್ರಜ್ಞ ಡಾ. ಗುರುಮೂರ್ತಿ ಅವರು ಎರೆಹುಳು ಗೊಬ್ಬರ, ಬೇವಿನ ಹಿಂಡಿಯನ್ನು ಯಥೇಚ್ಛವಾಗಿ ಬಳಸಬೇಕು, ೮೦ ಮಿ.ಲೀ. ನುವಾನ್ ಔಷಧವನ್ನು ೨೦ ಮಿ.ಲೋ. ನೀರಿನಲ್ಲಿ ಬೆರೆಸಿ ಚುಚ್ಚುಮದ್ದಿನಂತೆ ಕೀಟವು ಕಾಂಡದಲ್ಲಿ ಮಾಡಿದ ರಂಧ್ರಗಳಲ್ಲಿ ಸುರಿದು ಜೇಡಿ ಮಣ್ಣಿನಿಂದ ಮುಚ್ಚಲು ಸಲಹೆ ನೀಡಿದ್ದಾರೆ. ಸೆಗಣಿ ಗೊಬ್ಬರ ಬಳಸುವವರಿಗೆ ಫೊರೇಟ್ ೧೦ ಜಿ ಗುಳಿಗೆಯಿಂದ ಚಿಕಿತ್ಸೆ ಮಾಡಿ ಬಳಸಬೇಕು, ಸುತ್ತಮುತ್ತಲಿರುವ ಔಡಲ ಗಿಡಗಳು ಈ ಕೀಟಕ್ಕೆ ಆಶ್ರಯ ನೀಡುವುದರಿಂದ ಅವುಗಳನ್ನು ಕಿತ್ತು ಹಾಕಿ ಸುಡುವಂತೆ ಸಲಹೆ ನೀಡಿದ್ದಾರೆ.
0 comments:
Post a Comment