ಕೊಪ್ಪಳ, ಡಿ. ೨೦. ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಜನರ ನಾಡಿ ಮಿಡಿತವನ್ನು ಅರಿತುಕೊಂಡು, ಕನ್ನಡವನ್ನು ಕಟ್ಟಬೇಕು ಹಾಗೂ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಜಿಲ್ಲೆಯ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತ, ಸಮಾಜ ಸೇವೆಯಲ್ಲಿ ನಿರತವಾಗಿರುವದರಿಂದ, ಸಾಹಿತ್ತಿಕವಾಗಿ ಸಾಂಸ್ಕೃತಿಕವಾಗಿ ಉತ್ತಮ ಕೆಲಸ ಮಾಡಿರುಚದರಿಂದ ಮುಂಬರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವದಾಗಿ ಗೊಂಡಬಾಳ ತಿಳಿಸಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು. ಪ್ರಥಮ ಬಾರಿಗೆ ೨೦೦೮ ರಲ್ಲಿ ದಲಿತ ಸೇನೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಿ ನನಸು ಮಾಡಲಾಯಿತು. ಮೂರು ವರ್ಷ ಸತತವಾಗಿ ಕುಮಾರರಾಮನ ಕುಮ್ಮಟದುರ್ಗ ಉತ್ಸವ, ೩ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಜೊತೆಗೆ ಪ್ರತಿಭಾವಂತರಿಗೆ ಪ್ರಶಸ್ತಿ ಕೊಡುವದು, ತಾಲೂಕ ಕಸಾಪ ಕಾರ್ಯದರ್ಶಿಯಾಗಿ ಎರಡು ತಾಲೂಕ ಸಮ್ಮೇಳನ ಹೀಗೆ ಬಹಳಷ್ಟು ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆಂದು.
ಖ್ಯಾತ ನಾಟಕಕಾರ ಪಿ. ಬಿ. ಧುತ್ತರಗಿಯವರ ಪರಿಚಯದ ಕಲಾರಾಧಕ ಕೃತಿ, ಪತ್ರಕರ್ತ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿಯವರ ಪರಿಚಯದ ಗೋರಂಟಿ, ವಾಸುದೇವ ಕುಲಕರ್ಣಿ ಬರೆದ ಮಗುವಿಗಾಗಿ, ಯುವ ಸಮ್ಮಿಲನ, ಯುವ ಸ್ಪಂದನ ಕೃತಿಗಳನ್ನು ಪ್ರಕಟಿಸಿದ್ದು, ಶಬ್ದಗಳು, ಜೇನ ಹನಿ, ಕೊಪಣಾಚಲ ಎಂಬ ಕೃತಿಗಳು ಮುದ್ರಣದಲ್ಲಿವೆ. ವಿಜ್ಞಾನ ತಂತ್ರಜ್ಞಾನ, ಸಮಾಜ ಕಾರ್ಯ ಅಧ್ಯಯನ, ವೈದ್ಯಕೀಯ, ನ್ಯಾಯಾಂಗ ಹೀಗೆ ಅಗತ್ಯವಾದ ಕೃತಿಗಳನ್ನು ಪ್ರಕಟಿಸುವ ಕೆಲಸವನ್ನು ವಿಶ್ವಜ್ಯೋತಿ ಪ್ರಕಾಶನದಿಂದ ಮಾಡುತ್ತಿರುವದಾಗಿ ತಿಳಿಸಿದರು.
ಸಾಹಿತ್ಯ ಪರಿಷತ್ತು ಹಣ ಪೋಲು ಮಾಡುವ ಕೆಲಸ ಮಾಡುವ ಬದಲು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು, ಪರಿಷತ್ತು ಭವನವನ್ನು ಜೀವಂತವಾಗಿ ಇಡಬೇಕು, ಪರಿಷತ್ತು ಸಮ್ಮೇಳನಕ್ಕೆ ಸೀಮಿತವಾಗಬಾರದು, ನಿರಂತರವಾಗಿ ಕೆಲಸ ಮಾಡಬೇಕು. ಎಲ್ಲಾ ಆಜೀವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಬೇಕು, ಕಸಾಪ ಕನ್ನಡ ಪರೀಕ್ಷೆಗಳನ್ನು ಮುತುವರ್ಜಿಯಿಂದ ನಡೆಸಬೇಕು, ಜಿಲ್ಲೆಯ ಎಲ್ಲಾ ಬರಹಗಾರರ ಕೃತಿಗಳನ್ನು ಪ್ರಕಟಿಸಬೇಕು, ಸಮ್ಮೇಳನದ ಸ್ಮರಣ ಸಂಚಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಆಜೀವ ಸದಸ್ಯರಿಗೆ ಮುಟ್ಟಿಸಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಹೋರಾಟಗಾರ, ಪರಿಷತ್ತು ಆಜೀವ ಸದಸ್ಯ ಶಿವಾನಂದ ಹೊದ್ಲೂರ, ಯುವ ನಾಯಕ ಪರಿಷತ್ತಿನ ಆಜೀವ ಸದಸ್ಯ ರಾಕೇಶ ಕಾಂಬ್ಳೇಕರ್ ಇದ್ದರು.
0 comments:
Post a Comment