ಮದುಮೇಹದಿಂದ ಬಳಗುತ್ತಿದ್ದು 3 ದಿನದಿಂದ ಕೋಮದಲ್ಲಿದ್ದ ನಾಯಕ ಬಂಗಾರಪ್ಪ (79) ಮಲ್ಯ ಆಸ್ಪತ್ರೆಯಲ್ಲಿ ತಡ ರಾತ್ರಿ 12.40 ಗಂಟೆಗೆ ನಿಧನರಾದರು. ಸದಾಶಿವನಗರ ಮನೆಯಲ್ಲಿ ಪಾರ್ಥೀವ ಶರೀರ ದರ್ಶನ. ನಾಳೆ ಸೊರಬದಲ್ಲಿ ಅಂತ್ಯಕ್ರಿಯೆ..
ಬೆಂಗಳೂರು,ಡಿ.26:ಹಿಂದುಳಿದ ಜನಾಂಗದ ನಾಯಕ,ಸಮಾಜವಾದಿ,ಕರ್ನಾಟಕದ ಮಾಜಿ ಮುಖ್ಯಮಂತ್ರಿ,ಹಿರಿಯ ಮುತ್ಸದ್ದಿ ಸಾರೆಕೊಪ್ಪ ಬಂಗಾರಪ್ಪ(1932-2011)ಅವರು ಡಿ.26ರ ತಡ ರಾತ್ರಿ ಬೆಳಗಿನ ಜಾವ 12.40ಕ್ಕೆ ತೀರಿಕೊಂಡಿದ್ದಾರೆ.
ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.ಅವರು ಅಂತ್ಯದಿಂದಾಗಿ ಕರ್ನಾಟಕ ರಾಜಕೀಯ ಮುತ್ಸದ್ದಿ, ಸ್ಟೈಲಿಶ್ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
ಕೆಲ ದಿನಗಳ ಹಿಂದೆ"ನಾನು ಮತ್ತು ದೇವೇಗೌಡರು ರಾಜಕೀಯದಿಂದ ಯಾವತ್ತೂ ನಿವೃತ್ತರಾಗುವುದಿಲ್ಲ"ಎಂದು ಬಂಗಾರಪ್ಪ ಸರಿಯಾಗಿ ಒಂದು ವರ್ಷದ ಹಿಂದೆ ಜಾತ್ಯತೀತ ಜನತಾದಳ ಪಕ್ಷ ಸೇರಿದ ಸಂದರ್ಭದಲ್ಲಿ ಹೇಳಿದ್ದರು.ಕೊನೆಯವರೆಗೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿಯೇ ಉಳಿದಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಂಗಾರಪ್ಪ,ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಅವರಿಗೆ ಹೀನಾಯವಾಗಿ ಸೋತಿದ್ದರು.ನಂತರ ಕಾಂಗ್ರೆಸ್ ನಿಂದ ಬೇಸತ್ತು ಜೆಡಿಎಸ್ ಗೆ ಪಕ್ಷಾಂತರಗೊಂಡಿದ್ದರು.
ಪಕ್ಷಾಂತರಿಗಳ ಕಿಂಗ್:ಮೂಲತಃ ಕಾಂಗ್ರೆಸ್ಸಿಗನಾಗಿದ್ದ ವರನಟ ರಾಜಕುಮಾರ್ ಅವರ ಬೀಗ ಬಂಗಾರಪ್ಪ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ,ವೀರೇಂದ್ರ ಪಾಟೀಲ್ ಅವರು ನಿಧನರಾದಾಗ 1990ರಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.ನಂತರ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
ಅಲ್ಲಿಯೂ ಏಳಿಗೆಯಾಗದೆ 2005ರಲ್ಲಿ ಸಮಾಜವಾದಿ ಪಕ್ಷ ಸೇರಿ ಸೈಕಲ್ ಹೊಡೆದಿದ್ದರು. ಅಲ್ಲಿಂದರೂ ಲೋಕಸಭೆಗೆ ಆಯ್ಕೆಯಾಗಿ ನಂತರ ಮೂಲಪಕ್ಷ ಕಾಂಗ್ರೆಸ್ಸಿಗೆ ಜಂಪ್ ಆಗಿದ್ದರು. ಅಲ್ಲಿಂದ 2009ರಲ್ಲಿ ಮತ್ತೆ ಜೆಡಿಎಸ್ಸಿಗೆ. ತಾವೇ ಸ್ವತಃ ನಾನಾ ಪಕ್ಷಗಳನ್ನು ಕಟ್ಟಿದರೂ ಇವರಷ್ಟು ಪಕ್ಷಾಂತರ ಮಾಡಿದ ಇನ್ನೊಬ್ಬರಾಜಕಾರಣಿ ಕರ್ನಾಟಕದಲ್ಲಿ ಸಿಗಲಿಕ್ಕಿಲ್ಲ.
ಇತ್ತೀಚೆಗೆ ಬಂಗಾರಪ್ಪ ಅವರನ್ನು ಅವರ ಮನೆಯಲ್ಲಿಯೇ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರು ಎಂತಹ ಪ್ರೊಪೆಶನಲ್ ರಾಜಕಾರಣಿ ಎಂದರೆ ಕೊಪ್ಪಳ ಜಿಲ್ಲೆಯ , ಕೊಪ್ಳಳ ದ ಹಲವಾರು ರಾಜಕಾರಣಿಗಳ ಬಗ್ಗೆ ಕೇಳಿದರು, ಮಾತನಾಡಿದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಸರಳವಾಗಿ, ನೇರವಾಗಿ ಮಾತನಾಡಿದ ಅವರು ಪ್ರಸ್ತುತ ರಾಜಕಾರಣದ ಬಗ್ಗೆ ರೋಸಿ ಹೋಗಿದ್ದರು.
0 comments:
Post a Comment