PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಡಿ.  ಕೃಷಿ ಇಲಾಖೆಯು ಪೌಷ್ಠಿಕ ಭದ್ರತೆಗಾಗಿ ಕಿರುಧಾನ್ಯಗಳ ಉತ್ತೇಜನ ಯೋಜನೆ ಅಡಿಯಲ್ಲಿ ಖಾಸಗಿ ವಲಯದಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಆಸಕ್ತಿಯುಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುವುದು.  ಸಂಸ್ಕರಣೆಗಾಗಿ ಮೂಲಧಾನ್ಯಗಳು ಸ್ಥಳೀಯವಾಗಿ ಲಭ್ಯವಿರಬೇಕು. ವ್ಯಕ್ತಿ/ಸಂಸ್ಥೆ/ಸ್ವ ಸಹಾಂii ಸಂಘ/ರೈತ ಶಕ್ತಿ ಗುಂಪುಗಳು ಈಗಾಗಲೇ ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲಿ ಆದ್ಯತೆ ನೀಡುವುದು. ಸಂಸ್ಕರಣಾ ಘಟಕಗಳನ್ನು ಸುಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಕನಿಷ್ಟ ರೂ. ೫೦,೦೦೦ ಮೂಲಧನ ಹೊಂದಿರಬೇಕು. ಕನಿಷ್ಟ ೧೫ * ೨೦ ಮೀ. ಅಳತೆಯ ಸ್ಥಳದಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕಟ್ಟಡ, ವಿದ್ಯುಚ್ಛಕ್ತಿ ಮುಂತಾದ ಮೌಲ್ಯ ಸೌಕರ್ಯವನ್ನು ಹೊಂದಿರಬೇಕು. ಕೊಯ್ಲೋತ್ತರ ನಿರ್ವಹಣೆ ಹಾಗೂ ಮೌಲ್ಯವರ್ಧನೆಯಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಸೌಲಭ್ಯವನ್ನು ಪರಭಾರೆ ಮಾಡದಂತೆ ಸೂಕ್ತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಜಿಲ್ಲೆಗೆ ಒಂದು ಸಂಸ್ಕರಣಾ ಘಟಕ ಸ್ಥಾಪಿಸಲು ಅವಕಾಶ ಇದ್ದು, ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಆಯ್ಕೆ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆಸಕ್ತಿಯುಳ್ಳವರು ಡಿ. ೧೯ ರೊಳಗಾಗಿ ಜಂಟಿಕೃಷಿ ನಿರ್ದೇಶಕರು, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ತಮ್ಮ ಕಚೇರಿಯಿಂದ ಪಡೆದುಕೊಳ್ಳುವಂತೆ ಜಂಟಿಕೃಷಿ ನಿರ್ದೇಶಕರು   ತಿಳಿಸಿದ್ದಾರೆ.

Advertisement

0 comments:

Post a Comment

 
Top