koppal ಕೊಪ್ಪಳದಲ್ಲಿ ಹೊಸದಾಗಿ ಎನ್.ಸಿ.ಸಿ. ಬೆಟಾಲಿಯನ್ ಸ್ಥಾಪನೆಗೆ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಂದ ಸಕಾರಾತ್ಮಕ ಭರವಸೆ ದೊರೆತಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ನೂತನವಾಗಿ ಎನ್.ಸಿ.ಸಿ. ಬೆಟಾಲಿಯನ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಕೇಂದ್ರ ರಕ್ಷಣಾ ಖಾತೆ ಸಚಿವ ಎ.ಕೆ. ಆಂಟನಿ ಅವರಿಗೆ ಪತ್ರ ಬರೆದು ಕೋರಲಾಗಿತ್ತು. ಕೊಪ್ಪಳದಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎನ್.ಸಿ.ಸಿ. ಬೆಟಾಲಿಯನ್ ಸ್ಥಾಪಿಸಲು ಪರಿಶೀಲನೆ ನಡೆದಿದ್ದು, ವರದಿಯನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವರು, ಡಿ. ೧೨ ರ ಪತ್ರದಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಹೂಳು : ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಸುವ ಕುರಿತು ಸಂಸದರು ಲೋಕಸಭೆಯ ಅಧಿವೇಶನದಲ್ಲಿ ಗಮನ ಸೆಳೆದಿದ್ದು, ಸಂಸದರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ೨೦೦೮ ರ ಹೈಡ್ರಾಗ್ರಾಫಿಕ್ ಸರ್ವೆ ಆಧಾರದಂತೆ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ೧೦೦. ೮೫೫ ಟಿ.ಎಂ.ಸಿ.ಗೆ ಕುಸಿದಿದೆ. ಕಳೆದ ೫೫ ವರ್ಷಗಳಿಂದ ಈವರೆಗೆ ಒಟ್ಟು ೩೧. ೬೧೫ ಟಿ.ಎಂ.ಸಿ. ನೀರು ಸಂಗ್ರಹದ ಕೊರತೆಯಾಗಿದೆ. ಒಟ್ಟಾರೆ ಸಂಗ್ರಹ ಪ್ರಮಾಣದಲ್ಲಿ ಶೇ. ೨೩. ೮೬೭ ರಷ್ಟು ಕಡಿಮೆಯಾಗಿದೆ. ಜಲಾಶಯದಲ್ಲಿನ ಹೂಳು ತೆಗೆಸುವುದು ಹಾಗೂ ವಿಲೇವಾರಿ ಮಾಡುವುದು ಆರ್ಥಿಕವಾಗಿ ತುಂಬಾ ವೆಚ್ಚದಾಯಕವಾಗಿದೆ ಎಂದು ವಿವರಣೆ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
0 comments:
Post a Comment