PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ  : ೨೦೧೧-೧೨ನೇ ರಾಜ್ಯಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಗ್ರಾಮೀಣ ಕ್ರೀಡಾಕೂಟ ನ. ೨೫ ರವರೆಗೆ ಬಾಲಕ ಮತ್ತು ಬಾಲಕೀಯರಿಗೆ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುಂಪು -೧ರ ಅಥ್ಲೆಟಿಕ್ಸ್, ವ್ಹಾಲಿಬಾಲ್, ಬಾಸ್ಕೆಟ್ ಬಾಲ್ ಸ್ಪರ್ಧೆಯ ಕ್ರೀಡೆಗೆ ಪಾಲ್ಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದಿನಾಂಕ ೨೩-೧೧-೨೦೧೧ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ  ಬೆಳಿಗ್ಗೆ ೧೧.೦೦ ಗಂಟೆಯೊಳಗಾಗಿ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ. 
ಗುಂಪು -೨ರ ಕ್ರೀಡಾಕೂಟ : ರಾಜ್ಯಮಟ್ಟದ ಪೈಕಾ ಕ್ರೀಡಾಕೂಟ ಗುಂಪು -೨ರ ಸ್ಪರ್ಧೆಗಳಾದ ಖೋಖೋ, ಕಬ್ಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧೆಗಳನ್ನು ಬಾಲಕ, ಬಾಲಕೀಯರಿಗೆ ಬೆಳಗಾವಿಯ ಕ್ಲಬ್ ರೋಡ್‌ನ ಸಿ.ಪಿ.ಎಡ್ ಕಾಲೇಜ್ ಮೈದಾನದಲ್ಲಿ ನ.೨೬ ರಿಂದ ೨೮ ರವರೆಗೆ ನಡೆಸಲಾಗುವುದು. ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದಿನಾಂಕ ೨೬-೧೧-೨೦೧೧ ಸಿ.ಪಿ.ಎಡ್ ಕಾಲೇಜ್ ಮೈದಾನದಲ್ಲಿ ಮಧ್ಯಾಹ್ನ ೧೨.೦೦ ಗಂಟೆಯೊಳಗಾಗಿ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ . 
ಗುಂಪು -೩ರ ಕ್ರೀಡಾಕೂಟ : ರಾಜ್ಯಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ ಗುಂಪು ೩ರನ್ನು  ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ. ೨೬ ರಿಂದ ೨೮ ರವರೆಗೆ ಜರುಗಲಿವೆ. ಈ ಕ್ರೀಡಾಕೂಟದಲ್ಲಿ ಹ್ಯಾಂಡ್‌ಬಾಲ್, ಫುಟ್ಬಾಲ್, ಟೇಬಲ್ ಟೆನ್ನಿಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯಿಂದ ಆಯ್ಕೆಯಾದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ ೨೬-೧೧-೨೦೧೧ ರ ಬೆಳಿಗ್ಗೆ ೧೦ ಗಂಟೆಯೊಳಗಾಗಿ ವಯೋಮಿತಿ ಧೃಢೀಕರಣ ಹಾಗೂ ಗುರುತಿನ ಚೀಟಿಯೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಲು ಸೂಚಿಸಲಾಗಿದೆ.  ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆಯನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ನೀಡಲಾಗುವುದು ಮತ್ತು ದಿನಭತ್ಯೆಯನ್ನು ಈ ೩ ಕ್ರೀಡಾಕೂಟದ ಸಂಘಟಿಕರಲ್ಲಿ ಸಂದಾಯ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಸಿ.ಎ.ಪಾಟೀಲ್, ವ್ಹಾಲಿಬಾಲ್ ತರಬೇತುದಾರರು, ಹಾಗೂ ೯೪೮೬೩೩೧೪೬ ಎ.ಯತಿರಾಜು ಖೋಖೋ ತರಬೇತಿದಾರರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ  ತಿಳಿಸಿದೆ. State Level Paika Sports

Advertisement

0 comments:

Post a Comment

 
Top