ಉತ್ತರಕ್ಕೆ 2 ವಾರ ಗಡುವು
ಬೆಂಗಳೂರು, ನ.23: ಭಾಷೆ ಮತ್ತು ಗಡಿಯ ವಿಚಾರದಲ್ಲಿ ಪದೇ ಪದೇ ಉದ್ಧಟತನ ತೋರುವ ಹಾಗೂ ರಾಜ್ಯದ ಜನತೆಯ ಭಾವನೆಗಳಿಗೆ ಧಕ್ಕೆ ತರುವ ಬೆಳಗಾವಿ ಮಹಾನಗರ ಪಾಲಿಕೆಗೆ ‘ತಕ್ಕ ಶಾಸ್ತಿ’ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಅಭಿವೃದ್ಧಿಗೆ ಗಮನ ನೀಡದೆ ಕೇವಲ ಭಾವನೆಗಳನ್ನು ಕೆರಳಿಸುವಂತಹ ಉದ್ರೇಕ ಕಾರಿ ಆಚರಣೆಗಳಲ್ಲಿ ಕಾಲಹರಣ, ರಾಜ್ಯದ
ಒಟ್ಟು ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಬೆಳಗಾವಿ ನಗರ ಪಾಲಿಕೆಯ ವರ್ತನೆ ಮತ್ತು ಕಾರ್ಯ ವೈಖರಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಸೆಕ್ಷನ್ 99 ರ ಪ್ರಕಾರ ‘ನಗರ ಪಾಲಿಕೆಯನ್ನು ಯಾಕೆ ವಿಸರ್ಜಿಸಬಾರದು’ ಎಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ, ಕಾನೂನು, ಸಂಸದೀಯ ವ್ಯವಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳು, ಪೌರಾಡಳಿತ ಇಲಾಖೆಯ ಆಯು ಕ್ತರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಪಾಲಿಕೆಯಿಂದ ಉತ್ತರ ಬರದಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 100ರ ಪ್ರಕಾರ ಪಾಲಿಕೆ ವಿಸರ್ಜನೆಗೆ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಡೆಗಣಿಸಿ ಉದ್ಧಟತನ ತೋರುವ ಬೆಳಗಾವಿ ಪಾಲಿಕೆಯ ವರ್ತನೆಯನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಶೋಕಾಸ್ ನೋಟಿಸ್‌ಗೆ ಉತ್ತರಿ ಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಪಾಲಿಕೆಯಿಂದ ಉತ್ತರ ಬರದಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 100ರ ಪ್ರಕಾರ ಪಾಲಿಕೆ ವಿಸರ್ಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಚಿವ ಸುರೇಶ್ ಕುಮಾರ್, ಅಭಿವೃದ್ಧಿ ಕಡೆಗಣಿಸಿ ಉದ್ಧಟತನ ತೋರುವ ಬೆಳಗಾವಿ ಪಾಲಿಕೆಯ ವರ್ತನೆಯನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮೇಯರ್ ಹಾಗೂ ಉಪ ಮೇಯರ್ ಅಧಿಕೃತ ಕಾರ್ಯಕ್ರಮವನ್ನು ಧಿಕ್ಕರಿಸಿ ಬದಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕರಾಳ ದಿನ ಆಚರಣೆ ಮಾಡಿ ರಾಜ್ಯದ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮೇಯರ್ ಹಾಗೂ ಉಪ ಮೇಯರ್‌ರ ಈ ವರ್ತನೆ ಹಾಗೂ ಕಾರ್ಯವೈಖರಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.
ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಮೇಯರ್ 7 ತಿಂಗಳಲ್ಲಿ ಸಭೆ ನಡೆಸಿದ್ದು 3 ಬಾರಿ ಮಾತ್ರ. ಮಾಸಿಕ ಸಭೆ ನಡೆಸದಿರುವುದು, ರಾಜ್ಯೋತ್ಸವ ಸಂದರ್ಭದಲ್ಲಿ ನಡೆದುಕೊಂಡ ರೀತಿ, ಬಜೆಟ್ ಮಂಡನೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆಯ ಹಿನ್ನೆಲೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಹಾಗೂ ನಾಗರಿಕರ ಭಾವನೆಗೆ ಧಕ್ಕೆ ತರುವಂತಹ ಕಾರ್ಯ ಬೆಳಗಾವಿ ನಗರ ಪಾಲಿಕೆಯಿಂದ ನಡೆಯುತ್ತಿದ್ದು, ಇದು ಸತತವಾಗಿ ಮುಂದುವರಿದಿದೆ. 2010ರಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದ ಎಂ.ಬಿ. ನಿರ್ವಾಣಿ ಅವರಿಗೆ ಕನ್ನಡಿಗರು ಎಂಬ ಏಕೈಕ ಕಾರಣಕ್ಕೆ ಕೆಲ ಸದಸ್ಯರು ಇಡೀ ಒಂದು ವರ್ಷ ಸಭೆ ನಡೆಸಲು ಅವಕಾಶ ನೀಡಿಲ್ಲ. ಕಳೆದ ತಿಂಗಳು 29ಕ್ಕೆ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಅವರ ಸನ್ಮಾನದ ಸಂದರ್ಭದಲ್ಲಿ 17 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಪಾಲಿಕೆಯ ಈ ನಡೆ ಮತ್ತು ನುಡಿ ರಾಜ್ಯದ ಒಟ್ಟು ಆಶಯಕ್ಕೆ ವಿರುದ್ಧವಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಧೋರಣೆಯನ್ನು ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು.
0 comments:
Post a Comment