PLEASE LOGIN TO KANNADANET.COM FOR REGULAR NEWS-UPDATES


Koppal SFI strike  ಬಿ.ಟಿ. ಪಾಟೀಲ್ ನಗರದಲ್ಲಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನೀಯರ ಕಾಲೇಜು ವಸತಿ ನಿಲಯದಲ್ಲಿ ಮದ್ಯಾನ್ಹ ಊಟ ಮಾಡುವ ಸಂದರ್ಭದಲ್ಲಿ ಅನ್ನದಲ್ಲಿ ಬಾಲಹುಳಗಳು ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿನೀಯರು ಊಟವನ್ನು ಬಹಿಷ್ಕರಿಸಿ ವಸತಿ ನಿಲಯದಲ್ಲಿಯೇ ಎಸ್.ಎಫ್.ಐ ನೇತ್ರತ್ವದಲ್ಲಿ ಕೆಲಕಾಲ ಧರಣಿ ನಡೆಸಿದರು. ಗುಣ ಮಟ್ಟದ ಆಹಾರ ಸಿಗುತ್ತಿಲ್ಲವೆಂದು ಕಳೆದ ತಿಂಗಳು ಎಸ್.ಎಫ್.ಐ ನೇತ್ರತ್ವದಲ್ಲಿ ಇದೇ ವಸತಿ ನಿಲಯದ ವಿದ್ಯಾರ್ಥಿನೀಯರು ದೂರು ನೀಡಿದ್ದರು. ಆದರೆ ಯಾವುದೆ ಬದಲಾವಣೆ ಕಂಡಿರಲಿಲ್ಲ. ಅಧಿಕಾರಿಗಳು ವಸತಿ ನಿಲಯದ ಬಗ್ಗೆ ತೋರುತ್ತಿರುವ ಕಾಳಜಿ ಎಂತದ್ದು ಎಂದು ಈ ಮೂಲಕ ಅರ್ಥವಾಗುತ್ತದೆ.
 ಇದೇ ವಸತಿ ನಿಲಯದಲ್ಲಿ ಶೌಚಾಲಯ ಸಮಸ್ಯ ಇದ್ದು ಇರುವ ಒಂದೆ ಒಂದು ಶೌಚಾಲಯವನ್ನು ೫೦ ವಿದ್ಯಾರ್ಥಿನೀಯರು ಬಳಸುವಂತಾಗಿದೆ. ಅದನ್ನು ೧೫ ದಿನಗಳಿಗೊಮ್ಮೆ ಶುಚಿಮಾಡಬೇಕೆಂಬ ನಿಯಮವಿದ್ದರು ೩ ತಿಂಗಳಿಂದ ಅದನ್ನು ಸರಿ ಪಡಿಸಿಲ್ಲ ಪರಿಣಾಮ ಅದು ಕೆಟ್ಟ ವಾಸನೆ ಬರುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಳಕೆ ಮಾಡುವ ನೀರಿನ ತೊಟ್ಟಿ ಯನ್ನು ತೊಳಸದೆ ಇರುವುದರಿಂದ ನೀರಲ್ಲಿ ಹೂಳುಗಳಾಗಿದ್ದು ಅದನ್ನೆ ಅಡುಗೆಗೆ ಬಳಸುತ್ತಿರುವುದರಿಂದ ಈ ರಿತಿಯ ಎಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲ್ಲುಕ ಅಧಿಕಾರಿಗಳು ಈ ಘಟನೆಗೆ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಿದರು. ಈ ತರದ ಸಮಸ್ಯೆ ಆಗದಂತ ಎಚ್ಚರ ವಹಿಸಿ ಎಂದು ನಿಲಯಪಾಲಕರಿಗೆ ಎಚ್ಚರಿಕೆ ನೀಡಿದರು. ಗುಣಮಟ್ಟದ ಊಟ,ಫ್ಯಾನ್, ವಿದ್ಯತ್ ವ್ಯವಸ್ಥೆ, ಶೌಚಾಲಯ ಶುಚಿತ್ವ, ನೀರಿನ ತೊಟ್ಟಿಯನ್ನು ಇಂದೆ ಸುಧಾರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿನೀಯರಿಗೆ ಬೇರೆ ಅಡುಗೆಯನ್ನು ಮಾಡಿಸಲಾಯಿತು. ಧರಣಿ ಸಂದರ್ಭದಲ್ಲಿ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ, ತಾಲ್ಲಕು ಸಮಿತಿ ಸದಸ್ಯೆ ಸಂದ್ಯಾ, ಹನಮಂತಿ, ರೇಣುಕಾ, ರಂಗಮ್ಮ, ಲಕ್ಷೀ. ಸರಸ್ವತಿ, ಸೇರಿದಂತೆ ವಿದ್ಯಾರ್ಥಿನೀಯರು ಇದ್ದರು. 

Advertisement

0 comments:

Post a Comment

 
Top