ಬೆಂಗಳೂರು: ಸಿಒಡಿ ಮುಖ್ಯಸ್ಥ ಶಂಕರ್ ಬಿದರಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಭೇಟಿಯಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದ ಹೊರ ವಲಯದಲ್ಲಿರುವ ಈಗಲ್ ಟನ್ ರೆಸಾರ್ಟ್‌ನಲ್ಲಿ ಪಕ್ಷದ ಚಿಂತನ-ಮಂಥನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ, ಪರಸ್ಪರರು ವಾಗ್ದಾಳಿ ನಡೆಸಿದರು. ಕೃಷ್ಣಾ ಮೇಲ್ದಂಡೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಖುದ್ದು ಶಂಕರ ಬಿದರಿಯವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ಈಗ ರಹಸ್ಯವಾಗಿ ಭೇಟಿಯಾಗುವ ಮೂಲಕ ಪರಸ್ಪರರು ಹೊಂದಾಣಿಕೆ ಮನೋಭಾವಕ್ಕೆ ಬಂದಿರಬೇಕು ಎಂದು ಪರಮೇಶ್ವರ್ ಶಂಕಿಸಿದ್ದಾರೆ.
ಇದರಿಂದಾಗಿ ಜನರಲ್ಲಿ ಅಪಾರ್ಥ ಕಲ್ಪಿಸಲಾಗುತ್ತಿದೆ ಎಂದು ಪರಮೇಶ್ವರ್ ಆಕ್ಷೇಪ ವ್ಯಕ್ತ ಪಡಿಸಿ ದ್ದಾರೆ. ಭದ್ರಾ ಮೇಲ್ಡಂಡೆ ತುಂಡು ಗುತ್ತಿಗೆ ಹಗರಣವನ್ನು ಈಗಾಗಲೇ ಸಿಒಡಿ ತನಿಖೆಗೆ ಒಪ್ಪಿಸ ಲಾಗಿದೆ. ಈ ಹಿನ್ನಲೆಯಲ್ಲಿ ಅವರಿಬ್ಬರ ಭೇಟಿ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಆಪಾದಿಸಿದ್ದಾರೆ.
ಖಾಸಗಿಯಾಗಿ ಅವರ ಮನೆಗೆ ಹೋಗಿ ರಾತ್ರಿಯ ವರೆಗೂ ಚರ್ಚೆ ನಡೆಸಿರುವುದು ಸರಿಯಾಗಿ ಕಾಣಿಸುತ್ತಿಲ್ಲ. ಇದರಿಂದ ಎಲ್ಲೋ ಒಂದು ಕಡೆ ಜನರಲ್ಲಿ ತಪ್ಪು ಭಾವನೆಗೆ ಕಾರಣವಾಗುತ್ತದೆ ಎಂದಿದ್ದಾರೆ.
ಯಾರ ಕಾಲು ಹಿಡಿದಿಲ್ಲ: ಪರಮೇಶ್ವರ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಯಾರ ಕಾಲು ಹಿಡಿದಿಲ್ಲ. ಅಧಿಕಾರಿಗಳ ಕಾಲು ಹಿಡಿಯುವುದು ನನ್ನ ಜಾಯಮಾನವಲ್ಲ ಎಂದಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡುವುದು ನನ್ನ ಕರ್ತವ್ಯ ಎಂದಿದ್ದಾರೆ. ಕೃಷ್ಣಾ ಮೇಲ್ದಂಡೆ ತುಂಡು ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದರೇ ಪರಮೇಶ್ವರ್ ಅವರು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದ್ದಾರೆ.
0 comments:
Post a Comment