PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :  ನವ್ಯಶೈಲಿಯ ಮಹತ್ವದ ಕವಿ ಗವಿಸಿದ್ಧ ಎನ್.ಬಳ್ಳಾರಿಯವರ ಕಾವ್ಯ ಹೃದಯಕ್ಕೆ ತಟ್ಟುಂವಥದ್ದು.  ಅವರ ಕವನಗಳು ಶ್ರೇಷ್ಠಮಟ್ಟದ್ದವು ಎಂದು ಸಾಹಿತಿ ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು. ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೭೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು ಬಳ್ಳಾರಿಯವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಕವಿಸಮಯದಲ್ಲಿ ಪ್ರತಿವಾರ  ಒಬ್ಬೊಬ್ಬ ಕವಿಯ ಕಾವ್ಯ ವಾಚನ ಮತ್ತು ಅದರ ಬಗ್ಗೆ ಚರ್ಚೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವಾರ ಭಾಗವಹಿಸಿದ್ದ ಕವಿಗಳು ತಮ್ಮ ಕವನಗಳೊಂದಿಗೆ ಗವಿಸಿದ್ಧ ಎನ್.ಬಳ್ಳಾರಿಯವರ ಕಾವ್ಯವಾಚನ ಮಾಡಿದರು.
ವಿಠ್ಠಪ್ಪ ಗೋರಂಟ್ಲಿ- ಒಡಲಲ್ಲಿ ಕಿಚ್ಚಿಟ್ಟವರ್‍ಯಾರು, ಡಾ.ಮಹಾಂತೇಶ ಮಲ್ಲನಗೌಡರ- ನಾನು ಮತ್ತು ಕವಿತೆ, ಸಿರಾಜ್ ಬಿಸರಳ್ಳಿ- ಬಾಬು ಬಿಸರಳ್ಳಿಯರ ಕಪ್ಪು ಸೂರ್‍ಯನಿಗೆ ಸ್ವಾಗತ, ಶಿವಪ್ರಸಾದ ಹಾದಿಮನಿ- ವ್ಯತ್ಯಾಸ,ಅಯ್ಯೋ ಪಾಪ ಯಡಿಯೂರಪ್ಪ, ಪುಷ್ಪಾವತಿ- ಕನ್ನಡ ಮಾತೆಗೆ ನಮನ, ಡಾ.ರೇಣುಕಾ ಕರಿಗಾರ- ಬಿ ಹ್ಯಾಪಿ, ವಿಶ್ವಮಾನವ ಶ್ರೀರಾಮಕೃಷ್ಣ, ಪುಷ್ಪಲತಾ ಏಳುಬಾವಿ-  ಕವಿಶ್ರೇಷ್ಠ ಗವಿಸಿದ್ದ, ಎಂ.ಡಿ.ಹುಸೇನ್- ರಾಜಕೀಯ ಭ್ರಷ್ಟರು, ಡಾ.ವಿ.ಬಿ.ರಡ್ಡೆರ್- ಮಗು, ಅರಳಿದೆ, ಲಲಿತಾ ಭಾವಿಕಟ್ಟಿ- ಮಿನುಗುತಾರೆ, ಪ್ರದೀಪಕುಮಾರ- ಕಂಬನಿಯೇ ನಿನಗೆ ಧನ್ಯವಾದಗಳು, ಎನ್.ಜಡೆಯಪ್ಪ-ರಾಜಕಾರಣಿಗಳು, ಬಸವರಾಜ ಚೌಡಕಿ- ನನ್ನ ಗುರು ,ಕರಿಸಿದ್ಧನಗೌಡ- ದಾಳಿ,ನಿರಾಯುಧ ಕವನಗಳನ್ನು ವಾಚನ ಮಾಡಿದರು/
ಗವಿಸಿದ್ಧ ಎನ್.ಬಳ್ಳಾರಿಯವರ ಬಾಪೂಜಿ,  ೨೧ನೇ ಶತಮಾನದ ಮನುಷ್ಯ, ನನ್ನ ಆತ್ಮಕತೆ, ಈ ಮಣ್ಣ ಅಪ್ಪಿಕೊಳ್ಳುವ ಮುನ್ನ ಹಾಗು ಇತರೆ ಕವನಗಳನ್ನು ವಾಚನ ಮಾಡಿದರು. 
ಮುಂದಿನ ವಾರ ಗವಿಸಿದ್ಧ್ ಎನ್.ಬಳ್ಳಾರಿಯವರ ಕಾವ್ಯ ಕುರಿತು ವಿಮರ್ಶೆ ಮತ್ತು ಚರ್ಚೆ ನಡೆಯಲಿದೆ. ಹಿರಿಯ ಸಾಹಿತಿಗಳು ಮಾತನಾಡಲಿದ್ದಾರೆ.
ಕಾರ್‍ಯಕ್ರಮಕ್ಕೆ ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು - ಪುಷ್ಪಲತಾ ಏಳುಬಾವಿ ಮಾಡಿದರೆ. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Advertisement

0 comments:

Post a Comment

 
Top