PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. : ಕೊಪ್ಪಳ ತಾಲೂಕಿನ ವಿವಿಧ ಯೋಜನೆಗಳಿಗೆ ಸರ್ಕಾರ ೨. ೦೮ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
  ಕೊಪ್ಪಳ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಸಾಮೂಹಿಕ ಏತ ನೀರಾವರಿ ಯೋಜನೆಗಳಿಗೆ ೨ ಕೋಟಿ ಹಾಗೂ ತಾಲೂಕಿನಲ್ಲಿ ವಿವಿಧ ಮಸೀದಿಗಳ ನಿರ್ಮಾಣ, ದರ್ಗಾಗಳಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗಳಿಗಾಗಿ ಸರ್ಕಾರ ೮. ೫ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.  ಕೊಪ್ಪಳ ತಾಲೂಕಿನ ಮತ್ತೂರು, ಶಹಾಪುರ, ಗೊಂಡಬಾಳ, ಕೆರಳ್ಳಿ ಮತ್ತು ಹಲಗೇರಿ ಗ್ರಾಮಗಳ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗಾಗಿ ಸಾಮೂಹಿಕ ಏತನೀರಾವರಿ ಯೋಜನೆಗೆ ತಲಾ ೧೦ ಲಕ್ಷ ರೂ.ಗಳ ಅನುದಾನ ಹಾಗೂ ಕವಲೂರು ಗ್ರಾಮದ ಪ.ಜಾತಿಯ ಫಲಾನುಭವಿಗಳಿಗಾಗಿ ಸಾಮೂಹಿಕ ಏತ ನೀರಾವರಿ ಯೋಜನೆಗೆ ೧೦೦ ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.  ಕೊಪ್ಪಳ ತಾಲೂಕಿನ ಗಿಣಿಗೇರಾ, ಹನುಮನಹಳ್ಳಿ, ಕುಣಿಕೇರಿ, ಹಟ್ಟಿ ಹಾಗೂ ಬೇಳೂರು ಗ್ರಾಮದ ಪರಿಶಿಷ್ಟ ಪಂಗಡದ ಫಲಾನುಭವಿಗಳ ಸಾಮೂಹಿಕ ಏತನೀರಾವರಿ ಯೋಜನೆಗಾಗಿ ತಲಾ ೧೦ ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ.  
  ತಾಲೂಕಿನ ಕೊಪ್ಪಳ ನಗರದ ಹಜರತ್ ಬಾಬಾ ದರ್ಗಾದ ಕಾಂಪೌಂಡ್ ನಿರ್ಮಾಣಕ್ಕೆ- ೦೧ ಲಕ್ಷ ರೂ., ಹೊಸ ಶಿವಪುರದ ಮೆಹಬೂಬ ಸುಭಾನಿ ದರ್ಗಾದ ಕಾಂಪೌಂಡ್ ನಿರ್ಮಾಣಕ್ಕೆ- ೦೧ ಲಕ್ಷ, ಆಲಹಳ್ಳಿಯ ಮಸೀದಿ ನಿರ್ಮಾಣಕ್ಕೆ- ೧. ೫ ಲಕ್ಷ, ಹೊಸಬಂಡಿಹರ್ಲಾಪುರದ ಮಹಬೂಬ್ ಸುಭಾನಿ ದರ್ಗಾ ಕಾಂಪೌಂಡ್ ನಿರ್ಮಾಣಕ್ಕೆ- ೧. ೫ ಲಕ್ಷ, ಆಲಹಳ್ಳಿಯ ಮುಸ್ಲಿಂ ಜಾಮಿಯಾ ಮಸೀದಿ ನಿರ್ಮಾಣಕ್ಕೆ ೧. ೫ ಲಕ್ಷ ರೂ., ಬಿಕನಳ್ಳಿಯ ಆಶುರಖಾನ ದರ್ಗಾ ದುರಸ್ಥಿಗೆ- ೧. ೫ ಲಕ್ಷ, ಕವಲೂರಿನ ಶಾಮಿಯಾ ಮಸೀದಿ ಕಾಂಪ್ ದುರಸ್ಥಿಗೆ- ೧ ಲಕ್ಷ, ಹುಲಿಗಿಯ ಮುಸ್ಲಿಂ ಜಾಮಿಯಾ ಮಸೀದಿ ದರ್ಗಾ- ೧ ಲಕ್ಷ, ಕೊಪ್ಪಳದ ಅಂಜುಮನ್ ಮುಸ್ಲಿಂ ಸಂಸ್ಥೆ- ೧. ೫ ಲಕ್ಷ, ಕೊಪ್ಪಳದ ಮಿಟ್ಟಿಕೇರಿ ಓಣಿಯ ಇಮಾಮ್ ಖಾಸಿಂ ಆಶುರಖಾನ ದರ್ಗಾ- ೧ ಲಕ್ಷ ಹಾಗೂ ಕೊಪ್ಪಳದ ಉಸ್ಮಾನಿಯಾ ಕ್ಯಾಂಪಸ್ ಮಸೀದಿ- ೧.೫ ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.  
  ಕೊಪ್ಪಳ ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರು ಮಾಡಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಎಸ್ ಸವದಿ ಸೇರಿದಂತೆ ಎಲ್ಲಾ ಸಚಿವರುಗಳು, ಶಾಸಕರುಗಳು, ಸಂಸದರಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top