PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ.  : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ  ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಶ್ರೀ ಆಂಜನೇಯ ಯುವಕ ಮಂಡಳಿ, ರಘುನಾಥನಹಳ್ಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ರಘುನಾಥನ ಹಳ್ಳಿಯ ರಂಗಮಂದಿರ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಿವರಾಮ ಕೆ. ಇವರು ನೆರವೇರಿಸುವರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಗ್ರಾಮದ ಗಣ್ಯರಾದ ಮರಿಯಪ್ಪ ಬೋಚನಹಳ್ಳಿ ಅವರು ವಹಿಸುವರು.  ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆಯ ಆಸ್ತಿ ಹಕ್ಕು ಕುರಿತು  ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ದಸ್ತಗಿರಿಯಾದ ವ್ಯಕ್ತಿಯ ಹಕ್ಕುಗಳ ಕುರಿತು ವಕೀಲ ಪಿ. ಆರ್. ಹೊಸಳ್ಳಿಯವರು ಹಾಗೂ ಜನನ ಮರಣ ನೋಂದಣಿ ಕಾಯ್ದೆ ಕುರಿತು ಅಳವಂಡಿಯ ವಕೀಲ ಹೆಚ್. ಗುರುಬಸವರಾಜ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಬನ್ನೆಪ್ಪ ಪೂಜಾರ, ವಿರುಪಣ್ಣ ಬೋಚನಹಳ್ಳಿ, ಮುದಿಯಪ್ಪ ಕಮತರ, ದೊಡ್ಡ ಹುಚ್ಚಪ್ಪ ಪೂಜಾರ,ಶಿವಪುತ್ರಪ್ಪ ಕಮತರ, ಶಿವಾನಂದ ಗಾಳಿ, ಶಿವಪ್ಪ ಉಪ್ಪಾರ, ದೇವಪ್ಪ ಕವಲೂರು, ದೊಡ್ಡ ಸಿದ್ಧಲಿಂಗಪ್ಪ ಕರೂರು, ಭರಮಪ್ಪ ಕಮತರ, ಬಸವರಾಜ ಮುದಕಪ್ಪ ಕಮತರ, ಲಕ್ಷ್ಮಿಬಾಯಿ ರಮೇಶ ಸಿಂಧೋಗಿ ಇವರುಗಳು ಭಾಗವಹಿಸುವರು.
ಕಂಪ್ಲಿಯಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ  ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು ಕಂಪ್ಲಿ  ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೩ ರಂದು ಮಧ್ಯಾಹ್ನ ೨ ಗಂಟೆಗೆ ಕಂಪ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಿವರಾಮ ಕೆ. ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮದ ಗಣ್ಯ ವ್ಯಕ್ತಿ ಹನುಮಂತ ಗೌಡ್ರು ಗಾಳಿ ಅವರು ವಹಿಸುವರು.   ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ, ಅಳವಂಡಿ ಗ್ರಾಮ ಪಂಚಾಯತಿ ಸದಸ್ಯೆ ಸುನಂದವ್ವ ಗೆದ್ದಿಕೇರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಎ. ವಿ. ಕಣವಿ,  ಹಿಂದೂ ಮಹಿಳೆಯ  ಆಸ್ತಿ ಹಕ್ಕು ಕುರಿತು  ಎಂ. ಹನುಮಂತರಾವ್ ಹಾಗೂ ಗ್ರಾಹಕರ ಹಿತ ರಕ್ಷಣಾ ಕಾಯ್ದೆ ಕುರಿತು ಅಳವಂಡಿ ವಕೀಲರು ಹೆಚ್. ಗುರುಬಸವರಾಜ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಗುರುಮೂರ್ತಿ ಸ್ವಾಮಿಗಳು ಇನಾಮದಾರ, ಬಸವರೆಡ್ಡೆಪ್ಪ ಹಳ್ಳಿಕೇರಿ, ಶಿವನಗೌಡ ಮಾಲೀ ಪಾಟೀಲ, ರಮೇಶ ಎದುರುಮನಿ, ಪದ್ಮಾವತಿ ಕೊಳ್ಳಿ, ಹಂಚಿನಾಳಪ್ಪ ಗಾಳಿ, ಮಾಲನಬೀ ಹಿರೇಮನಿ, ನಾಗಮ್ಮ ನೀಲಂಡರ್, ನಾರಾಯಣಪ್ಪ ದೊತರಗಾವಿ, ಗಂಗಾಧರ ಜಲಾವಿ, ಅಬ್ದುಲ್ ಕರೀಂಸಾಬ ಹಿರೇಮನಿ, ಕೃಷ್ಣಪ್ಪ ಚಿಟಗಿ ಇವರು ಭಾಗವಹಿಸುವರು.

Advertisement

0 comments:

Post a Comment

 
Top