ಕೊಪ್ಪಳ : ಕೊಪ್ಪಳ ಎಪಿಎಂಸಿ ಹಮಾಲರಿಗೆ ಆಶ್ರಯ ನಿವೇಶನಕ್ಕಾಗಿ ತಾಲೂಕು ಹೂವಿನಾಳ ಬಳಿ ಖರೀದಿಸಲಾಗಿರುವ ೪.೩೪ ಎಕರೆ ಜಮೀನಿನ ಮೊತ್ತದ ಚೆಕ್ ಅನ್ನು ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ ಅವರು ಸಂಬಂಧಿಸಿದ ಜಮೀನು ಮಾಲೀಕರಿಗೆ ಹಸ್ತಾಂತರಿಸಿದರು.
ಕೊಪ್ಪಳ ಎ.ಪಿ.ಎಂ.ಸಿ ಹಮಾಲರಿಗಾಗಿ ಹೂವಿನಾಳ ಬಳಿ ೪. ೩೪ ಎಕರೆ ಜಮೀನು ಖರೀದಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಮೊತ್ತವನ್ನು ರಾಜೀವಗಾಂಧಿ ವಸತಿ ನಿಗಮವು ಬಿಡುಗಡೆ ಮಾಡಿದೆ. ಆಮೀನು ಖರೀದಿಯ ಮೊತ್ತದ ೩೫ ಲಕ್ಷ ರೂ.ಗಳ ಚೆಕ್ ಅನ್ನು ಜಮೀನು ಮಾಲೀಕರಾದ ಮೀನಾಕ್ಷಮ್ಮ, ಅಶೋಕ ಅವರಿಗೆ ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಮಾಲರ ಸಂಘದ ಅಧ್ಯಕ್ಷ ಖಾಜಾಸಾಬ, ಕಾರ್ಯದರ್ಶಿ ರಾಮಣ್ಣ ಕಲ್ಲನವರ್, ಉಪಾಧ್ಯಕ್ಷ ದೊಡ್ಡಬಸಪ್ಪ, ಆನಂದ ಆಡೂರು, ಹಾಲೇಶ್ ಕಂದಾರಿ ಮತ್ತಿತರರು ಹಾಜರಿದ್ದರು.
0 comments:
Post a Comment