PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. ೧೪. (ಕ. ವಾ) : ಕರ್ನಾಟಕ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಯೋಜನೆ ಕೃಷಿ ವಿಶ್ವ ವಿದ್ಯಾಲಯ ರಾಯಚೂರು ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 
       ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕಿಗೆ ೧೦ ಪರಿಶಿಷ್ಟ ಜಾತಿ ಮತ್ತು ೫ ಪರಿಶಿಷ್ಟ ಪಂಗಡ ರೈತ ಕುಟುಂಬಗಳನ್ನು ಆಯ್ದುಕೊಳ್ಳಲಾಗುವುದು. ಯೋಜನೆಯಡಿಯಲ್ಲಿ ಕನಿಷ್ಠ ಒಂದು (೨.೫ ಎಕರೆ) ನೀರಾವರಿ (ಬೋರುವೆಲ್/ಬಾವಿ/ಹೊಂಡ) ಇರಬೇಕು. ಸ್ವಂತ ಜಮೀನು ಹೊಂದಿರಬೇಕು. ಅದೇ ಜಮೀನಿನಲ್ಲಿ ಮನೆ/ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರಬೇಕು. ಕನಿಷ್ಟ ಒಂದು ಜೊತೆ ಎತ್ತು ಹೊಂದಿದ್ದು, ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಇನ್ನಿತರ ಯಾವುದೇ ಯೋಜನೆಯ ಫಲಾನುಭವಿಯಲ್ಲದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿರುವ ರೈತರಾಗಿರಬೇಕು. ಆಸಕ್ತಿಯುಳ್ಳ ರೈತರು ಈ ಯೋಜನೆಗಾಗಿ ಅರ್ಜಿಗಳನ್ನು ಸಹ ಪ್ರಧಾನ ಅನ್ವೇಷಕರು, ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆ (ಸ.ಕೃ.ಪ) ಮತ್ತು ಕಾರ್ಯಕ್ರಮ ಸಂಯೋಜಕರು ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ಶಿಕ್ಷಣ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಆವರಣ, ಕೊಪ್ಪಳ ಇವರಿಂದ ಪಡೆದು ಖುದ್ದಾಗಿ ದ್ವಿಪ್ರತಿಯಲ್ಲಿ ಅ. ೨೦ ರೊಳಗೆ ಸಲ್ಲಿಸಬಹುದು. ಅರ್ಜಿಯೊಂದಿಗೆ ಸಲ್ಲಿಸಲು ಜಾತಿ ಪ್ರಮಾಣ ಪತ್ರ ಹಾಗೂ ಜಮೀನಿನ ಪಹಣಿ / ಉತಾರ ತರಬೇಕು. ಹೆಚ್ಚಿನ ಸಂಖ್ಯೆಯಲ್ಲಿ  ಅರ್ಜಿಗಳು ಬಂದಲ್ಲಿ ರೈತ ಕುಟುಂಬಗಳನ್ನು ಚೀಟಿ ಎತ್ತುವುದರ ಮೂಲಕ ಆರಿಸಲಾಗುವುದು. ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಕೊಪ್ಪಳದ ವಿಸ್ತರಣಾ ಶಿಕ್ಷಣ ಘಟಕದ ಪ್ರಕಟಣೆ ತಿಳಿಸಿದೆ. 

Advertisement

0 comments:

Post a Comment

 
Top