ಕೊಪ್ಪಳ ಅ. : ಯಲಬುರ್ಗಾ ತಾಲೂಕು ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ೬ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಪರೀಕ್ಷೆಯು ದಿನಾಂಕ : ೧೨-೦೫-೨೦೧೨ (ಭಾನುವಾರ) ರಂದು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ..
ಅರ್ಜಿ ಸಲ್ಲಿಸಲು ೨೦೧೧-೧೨ ಸಾಲಿನಲ್ಲಿ ಸರ್ಕಾರಿ ಇಲ್ಲವೇ ಮಾನ್ಯತೆ ಪಡೆದ ಶಾಲೆಯಲ್ಲಿ ಮಾತ್ರ ೫ನೇ ತರಗತಿಯಲ್ಲಿ ಓದುತ್ತಿರಬೇಕು, ಅಭ್ಯರ್ಥಿಯು ದಿನಾಂಕ : ೦೧-೦೫-೧೯೯೯ ಕ್ಕಿಂತ ಮೊದಲು ಮತ್ತು ೩೦-೦೪-೨೦೦೩ ನಂತರ ಜನಿಸಿರಬಾರದು. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳಗೊಂಡಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ನಿಗದಿತ ಅರ್ಜಿ ಫಾರ್ಮಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರವರ ಕಛೇರಿ ಹಾಗೂ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಕುಕನೂರು, ಕೊಪ್ಪಳ ಜಿಲ್ಲೆ ಇವರ ಮುಖಾಂತರ ಉಚಿತವಾಗಿ ಪಡೆದುಕೊಳ್ಳಬಹುದು. ಹಾಗೂ ಸಮಿತಿಯ ವೆಬ್ ಸೈಟ್ ವಿಳಾಸ: hಣಣಠಿ:/ತಿತಿತಿ.ಟಿಚಿvoಜಚಿಥಿಚಿ.ಟಿiಛಿ.iಟಿ ನಿಂದಲೂ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಫಾರ್ಮಗಳನ್ನು ಅಭ್ಯರ್ಥಿಗಳು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅ. ೩೧ ರೊಳಗೆ ತಲುಪಿಸಿ ಅವರಿಂದ ಸ್ವೀಕೃತಿ ಪಡೆದುಕೊಳ್ಳಬಹುದು. ಪ್ರವೇಶ ಪರೀಕ್ಷೆಯು ದಿನಾಂಕ : ೧೨-೦೨-೨೦೧೨ ಭಾನುವಾರದಂದು ಬೆಳಿಗ್ಗೆ ೯-೩೦ ಕ್ಕೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತವೆ. ಪ್ರವೇಶ ಪರೀಕ್ಷೆಯ ಅವಧಿಯು ಎರಡು ಗಂಟೆಯದಾಗಿದ್ದು ಇದರಲ್ಲಿ ಗಣಿತ, ಮಾನಸಿಕ ಸಾಮರ್ಥ್ಯ ಹಾಗೂ ಭಾಷಾ ಪರೀಕ್ಷೆಗಳು ಇರುತ್ತವೆ.
ಹೆಚ್ಚಿನ ವಿಷಯಕ್ಕಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ ಅವರನ್ನು ಸಂಪರ್ಕಿಸಬಹುದು. ಅಥವಾ ವಿದ್ಯಾಲಯದ ದೂರವಾಣಿ ಸಂಖ್ಯೆ : ೦೮೫೩೪ - ೨೩೦೪೪೪ ಕ್ಕೆ ಸಂಪರ್ಕಿಸುವಂತೆ ಪ್ರಾಚಾರ್ಯ ಡಿ. ಶ್ಯಾಂ ಪ್ರಕಾಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment