PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಉಪನ್ಯಾಸಕರು ನಿರಂತರ ವಿದ್ಯಾರ್ಥಿಗಳಾಗಿರಬೇಕು. ಅಧ್ಯಯನ ಶೀಲರಾಗಬೇಕು.  ಅಧ್ಯಯನದಿಂದ ವ್ಯಕ್ತಿತ್ವ ವಿಕಸನವಾಗುವುದರಜೊತೆಗೆ ಪಾಠ ಬೋದನೆಗೂ ಅನುಕೂಲವಾಗುತ್ತದೆ. ಆದ್ದರಿಂದ ಉಪನ್ಯಾಸಕರು ನಿರಂತರ ಅಧ್ಯಯನ ಶೀಲರಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ ಪ್ರತಿಭೆಗಳನ್ನು ಹೊರಹಾಕುವಂತೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಜಾತಿಯತೆ, ಧರ್ಮಾಂದತೆ, ಸಂಕುಚಿತತೆ ಮನೋಭಾನೆಯಿಂದ ಹೊರಬರುವಂತೆ ಪ್ರೇರೆಪಿಸಿ ಉದಾತ್ತ ವಿಚಾರಗಳನ್ನು ಬೆಳಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿಜಯವರ್ಮ ಹೇಳಿದರು. 
ಅವರು ಶನಿವಾರ  ಪದವಿಪೂರ್ವ ಶಿಕ್ಷಣ ಇಲಾಖೆಯು ಪಿ.ಯು.ಸಿ. ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸಲು ಕೊಪ್ಪಳ ಜಿಲ್ಲಾ ಉಪನ್ಯಾಸಕರಿಗೆ ಹಮ್ಮಿಕೊಂಡ  ಜಿಲ್ಲಾ ಮಟ್ಟದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ವನ್ನು ಉದ್ದೇಶಿಸಿ ಮಾತನಾಡಿದರು.
ಇರಕಲಗಡಾ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎ.ಜಿ.ಶರಣಪ್ಪ, ಕೊಪ್ಪಳದ ಬಾಲಕರ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಬಿ.ರಾಜೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. 
  ಹನಮಂತಪ್ಪ ಅಂಡಗಿ ಚಿಲವಾಡಗಿ ನಿರೂಪಿಸಿದರು. ಕೆಸರಟ್ಟಿ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಸೋಮಶೇಖರಗೌಡ ಸ್ವಾಗತಿಸಿದರು. ಕೊಪ್ಪಳದ ಬಾಲಿಕೆಯರ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ರಾಜಶೇಖರ ಪಾಟೀಲ ವಂದಿಸಿದರು. 


Advertisement

0 comments:

Post a Comment

 
Top