ದುಬೈ: ವಿಜ್ರಂಭಣೆಯಿಂದ ನಡೆದ ಯು.ಎ.ಇ. ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಭಕ್ತಿ ಪರವಶರಾದ ಭಕ್ತ ಸಮೂಹ.
ದುಬೈ:ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಯು.ಎ.ಇ.ಬಂಟ್ಸ್ ವತಿಯಿಂದ ದುಬಾಯಿಯ ಅಲ್ ಬರ್ಶಾದಲ್ಲಿರುವ ಜೆ.ಎಸ್.ಎಸ್. ಇಂಟರ್ ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಸೆಪ್ಟೆಂಬರ್ 30ನೇ ತಾರೀಕು ಶುಕ್ರವಾರ ಬೆಳಿಗ್ಗೆ 9.30ಗಂಟೆಯಿಂದ ಮಧ್ಯಾಹ್ನ 1.30ಗಂಟೆಯವರೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಯು.ಎ.ಇ.ಯ ವಿವಿಧ ಭಾಗಗಳಿಂದ ಬಂಟ ಬಾಂಧವರು ತಮ್ಮ ಬಂಧು ಮಿತ್ರರೊಂದಿಗೆ ಆಗಮಿಸಿದ್ದರು.ಯು.ಎ.ಇ.ಯಲ್ಲಿರುವ ಇನ್ನಿತರ ಜಾತಿ ಸಮುದಾಯಗಳ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.ಸೇರಿದ ಎಲ್ಲಾ ಭಕ್ತರು ಭಕ್ತಿಭಾವದಿಂದ ಪೂಜಾ ವಿಧಿ ವಿಧಾನದಲ್ಲಿ ತನ್ಮಯತೆಯಿಂದ ಭಕ್ತಿಪರವಶರಾಗಿ ದೇವರ ಕೃಪೆಗೆ ಪಾತ್ರರಾದರು. ಅತ್ಯಂತ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಜೆ.ಎಸ್.ಎಸ್.ಶಾಲಾ ಸಭಾಂಗಣದಲ್ಲಿ ಒಂದು ಸಾವಿರದ ಮುನ್ನೂರಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸಾಕ್ಷಿಯಾದರು.
ರಘು ಭಟ್ ಶ್ರೀ ಸತ್ಯನಾರಾಯಣ ಪೂಜೆಯನ್ನು ಸಾಂಗವಾಗಿ ನೆರವೇರಿಸಿದರು.ಪೂಜಾ ಸೇವಾ ಕರ್ತರ ಪರವಾಗಿ ಮನೋಜ್ ಶೆಟ್ಟಿ ಮತ್ತು ಶ್ರೀಮತಿ ನೂಪುರ್ ಶೆಟ್ಟಿ, ಅನಿಲ್ ಶೆಟ್ಟಿ ಮತ್ತು ಶ್ರೀಮತಿ ರೇಖಾ ಶೆಟ್ಟಿ, ಶಿವಾನಂದ್ ಶೆಟ್ಟಿ ಮತ್ತು ಚೇತನಾ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ವೈಕುಂಠ ಮತ್ತು ಕೈಲಾಸದೊಂದಿಗೆ ಅಕರ್ಷಿಸಿದ ಪೂಜಾ ವೇದಿಕೆ
ಶ್ರೀ ಸತ್ಯನಾರಾಯಣ ಪೂಜಾ ವೇದಿಕೆಯನ್ನು ಬೃಹತ್ ಚಿತ್ರಪಟ ಅನಂತಶಯನ,ಮಹಾಲಕ್ಷ್ಮೀ, ಶಿವಲಿಂಗ ಪೂಜಿತ ಮಹಾಗಣಪತಿ ಶ್ರೀ ದುರ್ಗಾಪರಮೇಶ್ವರಿ ದೇವತಾ ಚಿತ್ರಗಳೊಂದಿಗೆ ನಂದಿನಿ,ಕಾಮದೇನು ಮೂರ್ತಿಗಳು,ಪುಷ್ಪಾಲಂಕಾರದೊಂದಿಗೆ ಶ್ರೀ ಸತ್ಯನಾರಾಯಣ ದೇವರ ಚಿತ್ರ ಕುಸುರಿ ಕೆಲಸದಲ್ಲಿ ನಿರ್ಮಿತವಾದ ಪ್ರಭಾವಳಿಯಲ್ಲಿ ಎರಡು ಬದಿಗಳಲ್ಲಿ ಆಂಜನೇಯ ಮತ್ತು ಗರುಡ ಕಟೌಟ್ ಇರಿಸಿದ್ದು,ಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು.ಚಿತ್ರ ಶಿಲ್ಪಿ ಕಲಾವಿದರಾದ ಗಣೇಶ್ ರೈ ಯವರ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ತಯಾರಾಗಿದ್ದ ಸುಂದರ ವೇದಿಕೆ,ಪೂಜಾ ಸಮಿತಿಯ ಅಲಂಕಾರ ತಂಡದ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು.
ಪೂಜಾ ಸಂಕಲ್ಪ ಕಲಶ ಪ್ರತಿಷ್ಠೆ ಪೂಜಾ ವಿದಿವಿಧಾನ ಪ್ರಾರಂಭ
ಯು.ಎ.ಇ.ಬಂಟ್ಸ್ ಮುಖ್ಯ ಸಂಘಟಕರಾದ ಶ್ರೀ.ಸರ್ವೊತ್ತಮ ಶೆಟ್ಟಿಯವರು ಸಮಸ್ಥ ಬಂಟ ಬಾಂಧವರು ಮತ್ತು ಅಹ್ವಾನಿತ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿದಿ ವಿಧಾನಗಳು ಪ್ರಾರಂಭವಾಯಿತು. ಪೂಜಾ ಪೀಠದ ಎದುರು ಭಾಗದಲ್ಲಿ ಪುಷ್ಪರಂಗವಲ್ಲಿಯ ಮೇಲಿರಿಸಲಾದ ಆಳೆತ್ತರದ ನಂದಾದೀಪವನ್ನು ಮತ್ತು ಪೂಜಾ ಪೀಠದ ಎರಡು ಬದಿಯಲ್ಲಿ ಇರಿಸಲಾಗಿದ್ದ ಲಕ್ಷದೀಪವನ್ನು ಸುಮಂಗಲೆಯರು ಬೆಳಗಿಸಿದರು. ಗುರುಪೂಜೆ, ಮತ್ತು ಗಣಪತಿ ಪೂಜೆ,ಕಳಸ ಪೂಜೆ,ನವಗ್ರಹ ಪೂಜೆ,ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ,ಭಜನೆ ಸಂಕೀರ್ತನೆ,ಸತ್ಯನಾರಾಯಣ ದೇವರ ಕಥೆ ನಂತರ ಮಹಾಮಂಗಳಾರತಿ ನಡೆಯಿತು.
ಭಜನಾ ಸಂಕೀರ್ತನ, ಅಭಂಗ ನೃತ್ಯ ಭಜನೆ ಸೇವೆ
ಯು.ಎ.ಇ.ಬಂಟ್ಸ್ ಪೂಜಾ ಸಮಿತಿಯ ಸದಸ್ಯರಾದ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಬಂಟರ ಭಜನಾ ತಂಡದೊಂದಿಗೆ,ಶ್ರೀ ರಾಜರಾಜೇಶ್ವರಿ ಭಜನಾ ತಂಡ ರಾಜೇಶ್ ಕುತ್ತಾರ್ ಮತ್ತು ಸಂಗಡಿಗರು,ಶ್ರೀ ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ.ಶ್ರೀ ಶಾಂತಾರಾಂ ಆಚಾರ್ ರವರ ತಂಡ ಮತ್ತು ಶ್ರೀ ನಾರಾಯಣ ಗುರು ಸೇವಾ ಸಮಿತಿ ಶ್ರೀ ಗಿರಿಧರ್ ನಾಯಕ್ ರವರ ತಂಡದ ಭಜನಾ ಸಂಕೀರ್ತನೆ ನಡೆದು ನಂತರ ವಿವಿಧ ಸಮುದಾಯದ ಹದಿನಾಲ್ಕು ಮಂದಿ ಮಹಿಳೆಯರು ಮತ್ತು ಪುರುಷರ ತಂಡದವರು ತುಳಸಿ ಕಟ್ಟೆ ಮತ್ತು ನಂದಾದೀಪದ ಸುತ್ತಲು ಭಜನೆಯೊಂದಿಗೆ ದೀಪದ ಸುತ್ತಲೂ ನೃತ್ಯ ಸೇವೆ ಸಲ್ಲಿಸಿ ನವರಾತ್ರಿಯ ಈ ದಿನದಲ್ಲಿ ನಡೆದ ಪೂಜೆಯಲ್ಲಿ ದಾಂಡೀಯಾ ನೃತ್ಯವನ್ನು ಸಹ ಮಾಡುತ್ತಾ ಭಕ್ತಿ ಸಮರ್ಪಣೆ ಮಾಡಿದರು.
ಪೂಜೆಯಲ್ಲಿ ಭಾಗಿಗಳಾದ ವಿವಿಧ ಸಮುದಾಯ ಸಂಘಟನೆಗಳು
ಯು.ಎ.ಇ.ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ಯು.ಎ.ಇ.ಯ ಎಲ್ಲಾ ಸಮುಧಾಯ ಮತ್ತು ಸಂಘಟನೆಯ ಅಧ್ಯಕ್ಷರು,ಪಧಾಧಿಕಾರಿಗಳು,ಸದಸ್ಯರು ಗಳು ಭಾಗವಹಿಸಿದ್ದರು.ಬಿಲ್ಲಾವಾಸ್ ದುಬಾಯಿ,ಬಿಲ್ಲವರ ಬಳಗ ದುಬಾಯಿ,ಬಿಲ್ಲವರ ಬಳಗ ಅಬುಧಾಬಿ,ವಿಶ್ವಕರ್ಮ ಸೇವಾ ಸಮಿತಿ.ಯು.ಎ.ಇ.;ಮೋಗವೀರ್ಸ್ ಯು.ಎ.ಇ.;ಅಮ್ಚಿಗೆಲೆ ಸಮಾಜ ಯು.ಎ.ಇ;ದೇವಾಡಿಗ ಸಂಘ ಯು.ಎ.ಇ;ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ;ಕೊಡವ ಸಮಾಜ;ವಕ್ಕಲಿಗರ ಸಂಘ ಯು.ಎ.ಇ.ಪದ್ಮಶಾಲಿ ಸಮುದಾಯ ಯು.ಎ.ಇ., ರಾಮರಾಜ ಕ್ಷತ್ರೀಯ ಸಂಘ ಯು.ಎ.ಇ;ಬ್ರಾಹ್ಮಣ ಸಮಾಜ ಯು.ಎ.ಇ;ತೀಯಾ ಸಮಾಜ, ಅಬುಧಾಬಿ ಕರ್ನಾಟಕ ಸಂಘ;ದುಬಾಯಿ ಕರ್ನಾಟಕ ಸಂಘ;ಶಾರ್ಜಾ ಕರ್ನಾಟಕ ಸಂಘ; ಧ್ವನಿಪ್ರತಿಷ್ಠಾನ;ಕನ್ನಡ ಕೂಟ;ಬಸವ ಸಮಿತಿ ಮತ್ತು ಹಲವಾರು ಹಿರಿಯರು,ಹಿತೈಷಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಸೇವಾಕರ್ತರಿಗೆ ಗೌರವ ಸಲ್ಲಿಕೆ
ಯು.ಎ.ಇ.ಬಂಟ್ಸ್ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ವಿವಿಧ ರೂಪದಲ್ಲಿ ಸೇವೆಯನ್ನು ಸಲ್ಲಿಸಿದವರನ್ನು ವೇದಿಕೆಗೆ ಬರಮಾಡಿಕೊಂಡು ಯು.ಎ.ಇ.ಬಂಟ್ಸ್ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಶಾಲು ನೀಡಿ ಗೌರವಿಸಿದರು.
ಶ್ರೀಮತಿ ಶಶಿ ಶೆಟ್ಟಿ,ಅರಬ್ ಉಡುಪಿ ಸಮೂಹ ಹೊಟೇಲ್ ವ್ಯವಸ್ಥಾಪಕ ನಿರ್ದೇಶಕರಾದ ಶೇಖರ್ ಶೆಟ್ಟಿ,ಫಾರ್ಚೂನ್ ಪ್ಲಾಜಾ ಹೊಟೇಲಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಶೆಟ್ಟಿ,ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಿದ ಅಲ್ ಐನ್ ವಾಟರ್ಸ್ ಸೇಲ್ಸ್ ಮ್ಯಾನೆಜರ್ ಪುರುಷೋತ್ತಮ್ ಪೈ, ಅನಿಲ್ ಶೆಟ್ಟಿ, ಮನೋಜ್ ಶೆಟ್ಟಿ,ಶ್ರೀ ಜೀವನ್ ಶೆಟ್ಟಿ,ಸತೀಶ್ ಶೆಟ್ಟಿ,ಸುಜಾತ್ ಶೆಟ್ಟಿ,ಸಂಗೀತ ಸತೀಶ್ ಶೆಟ್ಟಿ ಮಹಾ ಪ್ರಸಾದವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಿರುವ ದಿವೇಶ್ ಆಳ್ವ,ಶ್ರೀ ಶೇಖರ್ ಶೆಟ್ಟಿ ಇವರುಗಳು ಸೇವಾಕರ್ತರಾಗಿದ್ದರು.
ಮಾಧ್ಯಮದ ಮೂಲಕ ಪ್ರಚಾರ ನೀಡಿ ಸೇವೆ ಸಲ್ಲಿಸಿದ ಮಾಧ್ಯಮ ಪ್ರತಿನಿಧಿಗಳಾದ ಗಲ್ಫ್ ಕನ್ನಡಿಗದ ಛಾಯಚಿತ್ರ ಗ್ರಾಹಕ ಅಶೋಕ್ ಬೆಳ್ಮಣ್,ಶ್ರೀ ವಿವೇಕ್ ಆನಂದ್, ದಾಯಿಜಿ ವರ್ಲ್ಡ್ನ ಶೋಧನ್ ಪ್ರಸಾದ್,ನಮ್ಮ ಟಿ.ವಿ.ಮಾಧ್ಯಮದ .ವಿನಯ್ ನಾಯಕ್ ಇವರುಗಳು ಗೌರವಿಸಲಾಯಿತು.
ರಕ್ತದಾನ ಶಿಬಿರಕ್ಕೆ ದೊರೆತ ಪ್ರಸಂಶಾ ಪತ್ರ ನೀಡಿಕೆ.
ಯು.ಎ.ಇ.ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಯು.ಎ.ಇ.ಯಲ್ಲಿರುವ ವಿವಿಧ ಸಂಘಟನೆಗಳು ರಕ್ತದಾನ ಶಿಭಿರವನ್ನು ನಡೆಸಿಕೊಂಡು ಬರುತ್ತಿದ್ದು,ಈ ವರ್ಷ ಪವಿತ್ರ ರಂಜಾನ್ ಮಾಸದಲ್ಲಿ ಯು.ಎ.ಇ.ಬಂಟ್ಸ್ ರಕ್ತದಾನ ಶಿಭಿರವನ್ನು ಅಯೋಜಿಸಿದ್ದು,ಯು.ಎ.ಇ. ಹೆಲ್ತ್ ಮಿನಿಷ್ಟಿ ಯು.ಎ.ಇ.ಬಂಟ್ಸ್ ಸಂಘಟನೆಗೆ ಪ್ರಶಂಸಾ ಪತ್ರವನ್ನು ನೀಡಿದ್ದರು.ಸಂಘಟನೆಗೆ ದೊರೆತ ಪ್ರಶಂಸಾ ಪತ್ರವನ್ನು ರಕ್ತದಾನ ಅಯೋಜಕರಲ್ಲಿ ಒರ್ವರಾದ ಸುಧಾಕರ್ ಆಳ್ವ ರವರು ಸಭಾಂಗಣದಲ್ಲಿ ಸರ್ವರ ಸಮ್ಮುಖದಲ್ಲಿ ಸಂಘಟಕರಾದ ಸರ್ವೋತ್ತಮ ಶೆಟ್ಟಿಯವರಿಗೆ ಹಸ್ತಾಂತರಿಸಿದರು.ಅಂತಿಮ ಘಟ್ಟದಲ್ಲಿ ಗಣೇಶ್ ರೈಯವರು ಸರ್ವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಭಕ್ತ ಸಮೂಹದ ಮನಗೆದ್ದ ಮಹಾಪ್ರಸಾದ ವಿತರಣೆ
ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ,ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ಎರಡನೆಯ ಮಾಳಿಗೆಯ ಬೃಹತ್ ಹವಾನಿಯಂತ್ರಿತ ಭೋಜನ ಸಭಾಂಗಣದಲ್ಲಿ ಅತ್ಯಂತ ರುಚಿ ರುಚಿಯಾದ ಭಕ್ಷ್ಯ ಭೋಜನವನ್ನು ಮಹಾಪ್ರಸಾದವನ್ನಾಗಿ ಸ್ವೀಕರಿಸಿದ ಭಕ್ತ ಸಮೂಹ, ಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಶಾರ್ಜಾ ವುಡ್ ಲ್ಯಾಂಡ್ಸ್ ಹೊಟೇಲ್ ನ ದಿವೇಶ್ ಆಳ್ವ,ಮತ್ತು ಅಜ್ಮಾನ್ ಸಾಹಿಬಾ ಕ್ಯಾಟ್ರಿಂಗ್ ನ ಶೇಖರ್ ಶೆಟ್ಟಿ ಯವರನ್ನು ಮನಸಾರೆ ಅಭಿನಂದಿಸಿದರು.
ಪೂರ್ವಭಾವಿ ತಯಾರಿಕೆಯೊಂದಿಗೆ ಪೂಜಾಕಾರ್ಯಕ್ರಮವನ್ನು ಯಶಸ್ಸು ಗೊಳಿಸಲು ಕಾರಣಕರ್ತರಾದ ಕಾರ್ಯಕಾರಿ ಸಮಿತಿ.
ಯು.ಎ.ಇ.ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಮುಖ್ಯ ಜವಬ್ದಾರಿಯನ್ನು ವಹಿಸಿಕೊಂಡ ಸರ್ವೋತ್ತಮ ಶೆಟ್ಟಿ, ಗಣೇಶ್ ರೈ,ಸುಧಾಕರ್ ಆಳ್ವ ಇವರಿಗೆ ಜೊತೆಯಾಗಿ ಪ್ರವೀಣ್ ಕುಮಾರ್ ಶೆಟ್ಟಿ,ಶೇಖರ್ ಶೆಟ್ಟಿ, ದಿವೇಶ್ ಆಳ್ವ ಮತ್ತು ಯು.ಎ.ಇ. ಬಂಟ್ಸ್ ಈ ವರ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ದಂಪತಿಗಳು ಅಬುಧಾಬಿಯಿಂದ ಜೀವನ್ ಶೆಟ್ಟಿ-ದೀಪಶ್ರೀ ಶೆಟ್ಟಿ.ಸುಭಾಶ್ ಚೌಟ-ಸ್ಮಿತಾ ಚೌಟ,ಜಿತೇಂದ್ರ ಶೆಟ್ಟಿ-ಸುರೇಕಾ ಶೆಟ್ಟಿ, ದುಬಾಯಿಯಿಂದ ಮಹೇಶ್ ಶೆಟ್ಟಿ-ಹೇಮಾ ಶೆಟ್ಟಿ,ಅನಿಲ್ ಶೆಟ್ಟಿ-ರೇಖಾ ಶೆಟ್ಟಿ,ಅಶ್ವಿನ್ ಶೆಟ್ಟಿ- ಹರಿಣಿ ಶೆಟ್ಟಿ,ರಶ್ಮಿಕಾಂತ್ ಶೆಟ್ಟಿ-ಮೇಗ್ನಾ ಶೆಟ್ಟಿ,ಸುಕುಮಾರ್ ಶೆಟ್ಟಿ-ಸುಚಿತಾ ಶೆಟ್ಟಿ,ಪ್ರಸಾದ್ ಶೆಟ್ಟಿ-ಶೋಭಾ ಶೆಟ್ಟಿ,ಶಾರ್ಜಾದಿಂದ ರಾಕೇಶ್ ಶೆಟ್ಟಿ-ಅನುಪಮಾ ಶೆಟ್ಟಿ.
0 comments:
Post a Comment