PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.7: ರಾಜ್ಯ ಸರಕಾರವು ಬುಧವಾರವಷ್ಟೆ 70 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿತ್ತು. ಆದರೆ, ಇಂದು ಹೆಚ್ಚುವರಿಯಾಗಿ 14 ತಾಲೂಕುಗಳನ್ನು ಸೆೀರ್ಪಡೆಗೊಳಿಸಿದೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಹೆಚ್ಚುವರಿಯಾಗಿ 14 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಯಿತು.
ಬರಪೀಡಿತ ತಾಲೂಕುಗಳು: ಚಿತ್ರದುರ್ಗದ ಹಿರಿಯೂರು ಮತ್ತು ಹೊಳಲ್ಕೆರೆ, ತುಮಕೂರಿನ ಚಿಕ್ಕ ನಾಯಕನಹಳ್ಳಿ, ದಾವಣಗೆರೆಯ ಜಗಳೂರು ಮತ್ತು ಹರಪ್ಪನಹಳ್ಳಿ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ, ಬೆಳಗಾವಿ ಜಿಲ್ಲೆಯ ಸವದತ್ತಿ, ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ, ಹಾಸನ ಜಿಲ್ಲೆಯ ಅರಕಲ ಗೂಡು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕುಂದಗೋಳ ಮುಂತಾದ ತಾಲೂಕುಗಳು ಸೇರಿವೆ.

Advertisement

0 comments:

Post a Comment

 
Top