ಕೊಪ್ಪಳ :ಭಾರತ ಸಂವಿಧಾನ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದೆ. ನಂತರದಲ್ಲಿ ೬ ರಿಂದ ೧೪ ವರ್ಷದ ಎಲ್ಲಾ ಮಕ್ಕಳಿಗೂ ಕಡ್ಡಾಯ ಉಚಿತ ಶಿಕ್ಷಣ ನೀಡಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ ಹೀಗಾಗಿ ಮಕ್ಕಳ ಶಿಕ್ಷಣ ಹಕ್ಕು ಮಸೂದೆ ೨೦೦೯ ರಲ್ಲಿ ಪ್ರತಿಯೊಂದು ಮಗುವಿಗೂ ತನ್ನ ವಾಸ ಸ್ಥಳದಲ್ಲಿಯೇ ಶಿಕ್ಷಣ ನೀಡಲು ನಿರ್ದೇಶಿಸುತ್ತದೆ.
ಈ ಕಾಯ್ದೆಯನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಬದಲಾಗಿ ರಾಜ್ಯದಲ್ಲಿ ಸುಮಾರು ೩೧೭೪ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಭಾರತ ವಿದ್ಯಾರ್ಥಿ ಫೇಡರೇಷನ್ (SಈI) ಕೊಪ್ಪಳ ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಇಂತಹ ಶಿಕ್ಷಣದ ವಿರೋಧಿ ನೀತಿಯನ್ನು ಸರಕಾರ ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತದೆ.
ರಾಜ್ಯದಲ್ಲಿ ೩೮೦೦೦ ಶಿಕ್ಷಕರ ಹುದ್ದೆ ಖಾಲಿ ಇವೆ. ವಿದ್ಯಾರ್ಥಿಗಳಿಗೆ ಅವಶ್ಯವಿರುವ ಸೃಜನಶೀಲ, ಗುಣಾತ್ಮಕ ಶಿಕ್ಷಣ ಕಲಿಸಬಲ್ಲ ಕೌಶ್ಯಲ್ಯ ತರಬೇತಿಯನ್ನು ಶಿಕ್ಷಕರಿಗೆ ನೀಡತ್ತಿಲ್ಲಾ. ಅನಗತ್ಯ ಕೇಲಸದ ಹೊರೆಗೆ ಶಿಕ್ಷಕರು ಬಲಿಯಾಗಿದ್ದಾರೆ. ಒಂದು ಶಾಲೆಗೆ ಅವಶ್ಯವಿರುವ ಕನಿಷ್ಠ ಸೌಲಭ್ಯಗಳಾದ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಆಟದಮೈದಾನ, ಗ್ರಂಥಾಲಯ, ಪಿಠೋಪಕರಣ ಇತ್ಯಾಧಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲಾ. ೫೮% ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯಗಳಿಲ್ಲ, ಏಕೋಪಾದ್ಯಾಯ ಶಾಲೆಗಳು ಇರಬಾರದೆಂದು ಸುಪ್ರೀಂಕೊರ್ಟ್ ಹೇಳಿದ್ದರು ರಾಜ್ಯದಲ್ಲಿ ಸಾಲುಸಾಲಗಿವೆ. ಸರಕಾರಿ ಶಾಲೆಗಳಿಗೂ ಸೌಲಭ್ಯ ಕಲ್ಪಿಸಿ ಉನ್ನತೀಕರಿಸುವ ಬದಲಾಗಿ, ಮಕ್ಕಳ ಸಂಖ್ಯೆಯ ನೆಪ ಹೇಳಿ ಶಾಲೆಗಳ ಮುಚ್ಚಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಖಾಸಗೀಕರಣ ಪ್ರೇರಿತವಾದದ್ದು. ಶಿಕ್ಷಣವನ್ನು ವ್ಯಾಪಾರ ಮಾಡುವ ಪ್ರಕ್ರಿಯೆಗೆ ಶಕ್ತಿ ಕೊಡುವಂತಾಗಿದೆ. ಸರಕಾರಿ ಶಾಲೆಗಳಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಶಾಲೆಗಳ ಸ್ಥಾಪನೆಗೆ ಅವಕಾಶ ನೀಡಬಾರದೆನ್ನುವ ಸರಕಾರಿ ನಿಯಮದ ವಿರುದ್ಧ ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡಲಾಗಿದೆ. ಈಗಾ ಖಾಸಗಿಯವರ ಲಾಬಿಗೆ ಮಣಿದು ಸರಕಾರಿ ಕನ್ನಡ ಶಾಲೆ ಮುಚ್ಚಲು ಹೊರಟಿರುವ ಕ್ರಮ ಬಡ-ದಲಿತ ಹಿಂದುಳಿದ ವರ್ಗಗಳ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವಂತದ್ದಾಗಿದೆ. ೧೯೯೪ ನಂತರ ಅನಧಿಕೃತವಾಗಿ ಆಂಗ್ಲ ಭಾಷಾ ಮಾಧ್ಯಮದ ಹೆಸರಿನಲ್ಲಿ ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ತರಲು ಮುಂದಾಗದ ಸರಕಾರ, ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಮಾತೃಭಾಷೆಗೆ ಮಾಡುತ್ತಿರುವ ದ್ರೋಹವಾಗಿದೆ.
ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ನಿರ್ಧಾರದಿಂದ ಹಿಂದೆ ಸರಿದು ಸೂಕ್ತ ಸೌಲಭ್ಯ ಕಲ್ಪಿಸಿ ವಿರ್ದ್ಯಾರ್ಥಿಗಳನ್ನು ಆಕರ್ಷಿಸುವ ಯೋಜನೆ ರೂಪಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೇಡರೇಷನ್ (SಈI) ಅಕ್ಟೋಬರ್ ೨೦ ರಂದು ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಲಿದೆ. ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ನವೆಂಬರ್ ೧ ರಂದು ಕರಾಳ ದಿನಾಚರಣೆ ಆಚರಿಸಲು ಮುಂದಾಗಬೇಕಾಗುತ್ತದೆ. ಎಂದು ಎಚ್ಚರಿಸುತ್ತೇವೆ. ಎಂದು ಎಸ್,ಎಫ್,ಐ ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ, ಕಾರ್ಯದರ್ಶಿ ಗ್ಯಾನೇಶ ಕಡಗದ್, ಮುಖಂಡರಾದ ಮಾರುತಿ ಮ್ಯಾಗಳಮನಿ, ಸುಬಾನ್ ಸೈಯ್ಯದ್, ಯಮನೂರ್, ದಾದಾಸಾಹೇಬ್, ರಾಜೇಶ್ವರಿ, ನವೀನ್ ಕುಲ್ಕರ್ಣಿ ತಿಳಿಸಿದ್ದಾರೆ.
0 comments:
Post a Comment