PLEASE LOGIN TO KANNADANET.COM FOR REGULAR NEWS-UPDATES


 ಜ್ಞಾನಪೀಠ ಸಾಹಿತ್ಯದ ಮೌಲ್ಯಕ್ಕೆ ದಕ್ಕುವಂತಹದ್ದು. ಸಾಹಿತ್ಯದ ಸೈದ್ಧಾಂತಿಕ ನಿಲುವುಗಳಿಗೆ ದಕ್ಕುವುದಾದರೆ ಎಸ್.ಎಲ್.ಭೈರಪ್ಪ ಅವರಿಗೆ ಪ್ರಶಸ್ತಿ ಸಿಗಬೇಕು ಎಂಬುದನ್ನು ಒಪ್ಪುವುದಿಲ್ಲ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯದ ಟೀಕೆ, ವಿಮರ್ಶೆಗಳು ಎಂದಿಗೂ ಗಂಭೀರವಾಗಿಯೇ ಇರಬೇಕು. ಅದು ಹಗುರವಾಗಬಾರದು ಎಂದರು.ಕಂಬಾರರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಅಪಸ್ವರ ಸಲ್ಲದು. ಮುಖ್ಯವಾಗಿ ಜ್ಞಾನಪೀಠ ಕನ್ನಡ ಸಾಹಿತ್ಯಕ್ಕೆ ದೊರಕಿರುವುದು ಸಂತಸದ ಸಂಗತಿ. ಕಂಬಾರರು ನವ್ಯಕಾವ್ಯದಲ್ಲಿ ವಿಭಿನ್ನ ಕೃಷಿ ಮಾಡಿ, ಅದಕ್ಕೆ ಜನಪದ ಸ್ಪರ್ಶ ನೀಡಿದವರು ಎಂದು ಬಣ್ಣಿಸಿದರು.

Advertisement

0 comments:

Post a Comment

 
Top