ಕೊಪ್ಪಳ ಅ. : ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಕೊಪ್ಪಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅವರನ್ನು ಅಮಾನತಿನಿಂದ ಮುಕ್ತಗೊಳಿಸಿ, ಅದೇ ಶಾಲೆಯಲ್ಲಿ ಮರುನೇಮಕಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕರ್ತವ್ಯಲೋಪದ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕೊಪ್ಪಳದ ಸರ್ದಾರ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಂಭುಲಿಂಗನಗೌಡ ಹಲಗೇರಿ ಅವರನ್ನು ಅಮಾನತುಗೊಳಿಸಿದ್ದರು. ಸದ್ಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅವರನ್ನು ಅಮಾನತು
ಆದೇಶದಿಂದ ಮುಕ್ತಗೊಳಿಸಿದ್ದು, ಅ. ೪ ರಿಂದ ಅನ್ವಯವಾಗುವಂತೆ ಶಂಭುಲಿಂಗನಗೌಡ ಹಲಗೇರಿ ಅವರನ್ನು ಅದೇ ಶಾಲೆಗೆ ಮರುನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
0 comments:
Post a Comment