ಕೊಪ್ಪಳ : ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡನೆಟ್.ಕಾಂ ಕವಿಸಮೂಹ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಕಾವ್ಯ ಮತ್ತು ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಹೈಸ್ಕೂಲ್ ವಿಭಾಗ ಮತ್ತು ಕಾಲೇಜು ವಿಭಾಗಗಳಲ್ಲಿ ಪ್ರತ್ಯೇಕ ಸ್ಫರ್ಧೆ ಮತ್ತು ಬಹುಮಾನವಿರುತ್ತದೆ. ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಾವ್ಯ ಸ್ಫರ್ಧೆ ಇದ್ದು ಇದು ಮುಕ್ತವಾಗಿರುತ್ತದೆ. ಯಾವುದೇ ವಿಷಯದ ಕುರಿತು ಕವನ ರಚಿಸಬಹುದು. ಪ್ರಬಂಧ ಸ್ಪರ್ಧೆಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗೆ 'ಕನ್ನಡ ನಾಡು ಹಿರಿಮೆ ಗರಿಮೆ' ವಿಷಯವಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ 'ಕನ್ನಡದ ಪ್ರಸ್ತುತ ಸಮಸ್ಯೆಗಳು' ಕುರಿತು ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ವಿಜೇತ ವಿದ್ಯಾರ್ಥಿಗಳಿಗೆ ನವಂಬರ್ ತಿಂಗಳ ಕವಿಸಮಯದ ಕಾರ್‍ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಗುವುದು. ತಮ್ಮ ಕವನ/ಪ್ರಬಂಧಗಳನ್ನು ಇದೇ ಅಕ್ಟೋಬರ್ ೩೧ರೊಳಗೆ ತಲುಪುವಂತೆ ಕಳಿಸಬೇಕು. ಕಳಿಸಬೇಕಾದ ವಿಳಾಸ : ಸಂಪಾದಕರು,ಕನ್ನಡನೆಟ್.ಕಾಂ ಕರಿಷ್ಮಾ ಡಿಜಿಟಲ್ಸ್,ಬಸವಣ್ಣ ಗುಡಿ ಕಾಂಪ್ಲೆಕ್ಸ್, ದುರ್ಗಮ್ಮ ಕಟ್ಟೆ ಹತ್ತಿರ,ಕೊಪ್ಪಳ-೫೮೩ ೨೩೧. ಹೆಚ್ಚಿನ ವಿವರಳಿಗೆ ಸಂಪರ್ಕಿಸಿ ಮಹೇಶ್ ಬಳ್ಳಾರಿ ೯೦೦೮೯೯೬೬೨೪, ಎನ್.ಜಡೆಯಪ್ಪ- ೯೪೪೯೭೬೧೩೯೩, ಶಿವಪ್ರಸಾದ ಹಾದಿಮನಿ - ೯೯೧೬೫೨೫೨೮೯, ಸಿರಾಜ್ ಬಿಸರಳ್ಳಿ- ೯೮೮೦೨೫೭೪೮೮ ಸಂಪರ್ಕಿಸಲು ಕೋರಲಾಗಿದೆ.
0 comments:
Post a Comment