ಕೊಪ್ಪಳ: ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮವನ್ನು ತಾಲೂಕಿನಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡುವೆ ಎಂದು ಗಂಗಾವತಿ ವಿದಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮನವಳ್ಳಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದ ಕಾಲೋನಿಯಲ್ಲಿ ೧೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸಿ.ಸಿ. ರಸ್ತೆ, ಸಾರ್ವಜನಿಕ, ಶೌಚಾಲಯ, ಕುಡಿಯುವ ನೀರು ಮತ್ತ ಚರಂಡಿ ವ್ಯವಸ್ಥೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರ. ನಂತರ ದುರಗಮ್ಮನ ಗುಡಿ ಪಕ್ಕದಲ್ಲಿ ೬ ಲಕ್ಷ ವೆಚ್ಚದ ಹೈಮಾಸ್ಕ ದೀಪ ಉದ್ಘಾಟಿಸಿ ಮಾತನಾಡಿದರು.
ಇಂದರಗಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಶ್ಯಾವಮ್ಮ ಬೆಟಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಂಗ್ರೇಸ ಯುವ ಮುಖಂಡರಾದ ಮಲ್ಲೇಶಪ್ಪ ಗುಮಗೇರಿ, ತಾಲೂಕ ಪಂಚಾಯತ ಸದಸ್ಯರಾದ ಭೀಮವ್ವ ಪಮ್ಮಾರ, ಎ.ಪಿ.ಎಂ.ಸಿ ಸದಸ್ಯರಾದ ಫಕೀರಯ್ಯ ಹಿರೇಮಠ, ಇಂದರಗಿ ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ರಾಮಣ್ಣ ಮೂಗುತಿ, ಸದಸ್ಯರಾದ ಆನಂದ ಕೊಳ್ಳಿ, ಹನುಮಂತಪ್ಪ ಬೊವಿ, ಹನುಮಂತಪ್ಪ ಬೆಟಗೇರಿ, ಇಂದ್ರಪ್ಪ ಪೂಜಾರ, ಶಿವಗಂಗಮ್ಮ ಹಡಪದ, ಗಂಗಮ್ಮ ಹರಿಜನ, ಇಂದ್ರಮ್ಮ ಕಟಗಿಹಳ್ಳಿ, ಬಸಪ್ಪ ಕೊಳೂರ, ಬೂದಗುಂಪಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುರಣ್ಣ ಈಳಗೇರ, ಚಿಕ್ಕಬೆಣಕಲ್ ಗ್ರಾಮಪಂಚಾಯತಿ ಅಧ್ಯಕ್ಷರಾದ ಲಿಂಗಪ್ಪ ಮಠದ, ಗಂಗಾವತಿ ಎ.ಪಿ.ಎಂ.ಸಿ ಅಧ್ಯಕ್ಷರಾದ ಅಮರೇಗೌಡ, ಬಿ.ಜೆ.ಪಿ. ಮುಖಂಡರಾದ ವಿರುಪಾಕ್ಷಯ್ಯ ಗೊಂಡಬಾಳ ಮಲ್ಲನಗೌಡ್ರ, ಈರಪ್ಪ ಹುಳ್ಳಿ, ಸಂಗಪ್ಪ ಬಿಜಕಲ್, ಬಸವರಾಜ ಹಲಗೇರಿ, ಬೆಟದಪ್ಪ ಬೆಟಗೇರಿ, ನಿರ್ಮಿತಿ ಕೇಂದ್ರದ ಅಭಿಯಂತರರಾದ ಗಂಗಾಧರ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕುಮಾರಿ ಅಂಬಿಕಾ ಪ್ರಾರ್ಥಿಸಿದರು, ಯುವ ಮುಖಂಡ ಗವಿಸಿದ್ದಪ್ಪ ಆವರಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಗವಿಸಿದ್ದಪ್ಪ ಕುರಿ ಸ್ವಾಗತಿಸಿದರು. ಯುವ ಮುಖಂಡ ಇಂದ್ರೇಶ ಪೂಜಾರ ವಂದಿಸಿದರು.
0 comments:
Post a Comment