ಕೊಪ್ಪಳ:- ನವಂಬರ್‌ನಲ್ಲಿ ಗಂಗಾವತಿಯಲ್ಲಿ ನಡೆಯುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೈದರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನ-ಮಾನ ನೀಡುವ ಸಂವಿಧಾನದ ಅನುಚ್ಛೇದ ೩೭೧ನೇ ಕಲಂ ಜಾರಿಯ ಕುರಿತು ಅದರ ಸಾಧಕ-ಬಾಧಕಗಳ ಚರ್ಚೆಗಾಗಿ ಒಂದು ವಿಶೇಷ ಉಪನ್ಯಾಸ ಗೋಷ್ಠ ಏರ್ಪಡಿಸಲು ಸಮ್ಮೇಳನ ಸಂಘಟಕರಿಗೆ ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನಕಲ್ ಮನವಿ ಮಾಡಿದ್ದಾರೆ.
ಹೈದರಾಬಾದ-ಕರ್ನಾಟಕ ಸಮೃದ್ಧಿಯ ನಾಡು ಪ್ರಪಂಚಕ್ಕೆ ವಚನ ಮತ್ತು ದಾಸ ಸಾಹಿತ್ಯದ ಮೂಲಕ ಬೆಳಕು ನೀಡಿದ ನಾಡು, ದೇಶಕ್ಕೆ ವಿದ್ಯುತ್, ಭತ್ತ, ತೊಗರಿ, ಸಿಮೆಂಟ್, ಖನಿಜ ಮತ್ತು ಕೈಗಾರಿಕೆ ನೀಡಿದ ನಾಡು. ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುವ ತಾಯಿನಾಡು ಇಂತಹ ಸಮೃಧಿಯ ನಾಡು ಮತ್ತು ಇಲ್ಲಿನ ಜನ ಅನೇಕ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವುದು ಒಂದು ದುರ್ದೈವವೇ ಸರಿ ಇಂತಹ ನಾಡಿಗೆ ಸಂವಿಧಾನದ ೩೭೧ನೇ ಕಲಂ ಜಾರಿಯಗಲೇ ಬೇಕಾಗಿದೆ. ಈ ಭಾಗದಲ್ಲಿ ಇಂತಹ ಮಹಾ ಸಮ್ಮೇಳನ ನಡೆಯುವ ಸುಸಂದರ್ಭದಲ್ಲಿ ೩೭೧ನೇ ವಿಧಿಯ ಕುರಿತಾದ ವಿಚಾರ-ಗೋಷ್ಠಿಗಳು ನಡೆಸುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದ್ದಾರೆ.
0 comments:
Post a Comment