ಬೆಂಗಳೂರು, ಅ.30: 2011ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಮಂದಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ.
ಪ್ರಶಸ್ತಿ ವಿಜೇತರ ಪಟ್ಟಿಯನ್ನು ರವಿವಾರ ವಿಧಾನ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ, ಯಕ್ಷಗಾನ, ಪತ್ರಿಕೋದ್ಯಮ, ಸಂಘ-ಸಂಸ್ಥೆ, ಕ್ರೀಡೆ, ಚಲನಚಿತ್ರ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ರಂಗಭೂಮಿ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ 50 ಮಂದಿ ಸಾಧಕರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನದ ಪದಕ ಹೊಂದಿದೆ. ಪ್ರಶಸ್ತಿಯನ್ನು 56ನೆ ರಾಜ್ಯೋತ್ಸವ ಸಮಾರಂಭದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಸಿ.ಆರ್.ರಾಜು, ಪ್ರೊ.ಅರವಿಂದ ಮಾಲಗತ್ತಿ ಬಿಜಾಪುರ (ಸಾಹಿತ್ಯ), ಅಂಬಳಿ ರಾಜೇಶ್ವರಿ ಹಾಸನ (ನೃತ್ಯ), ಕೆ.ನಾಗರಾಜ್ ಚಿತ್ರದುರ್ಗ (ರಂಗಭೂಮಿ), ಸರಿಗಮ ವಿಜಿ (ಚಲನಚಿತ್ರ), ಹರೀಶ್ ಹಂದೆ ಬೆಂಗಳೂರು (ವಿಜ್ಞಾನ), ಕುಂಜಾಲು ರಾಮಕೃಷ್ಣ ನಾಯಕ್ (ಯಕ್ಷಗಾನ), ಪತ್ರಿಕೋದ್ಯಮದಲ್ಲಿ ಜಗದೀಶ್ ಮಣಿಯಾಣಿ (ಈಟಿವಿ), ಕೆ.ಎನ್.ತಿಲಕ್ ಕುಮಾರ್ (ಪ್ರಜಾವಾಣಿ), ಜಿ.ಎಸ್.ಕುಮಾರ್(ಟೈಮ್ಸ್ ಆಫ್ ಇಂಡಿಯಾ), ಪ್ರತಾಪ್ ಸಿಂಹ(ಕನ್ನಡ ಪ್ರಭ), ಮಂಜುನಾಥ ಭಟ್(ಸಂಯುಕ್ತ ಕರ್ನಾಟಕ).
ಎಂ.ಎನ್.ನಂದಕುಮಾರ್ ಲಂಡನ್, ರೇಣುಕಾ ದುರ್ಗಪ್ಪ ಹರಿಜನ ಬಾಗಲಕೋಟೆ, ವೀರಣ್ಣ ದಂಡೆ ಗುಲ್ಬರ್ಗಾ, ಮಂಡಿರ ಜಯ ಅಪ್ಪಣ್ಣ ಕೊಡಗು, ಶಾಂತಿನಾಥ್ ದಿಬ್ಬಗ.
ಸಂಗೀತ ಕ್ಷೇತ್ರ: ಎಚ್.ಫಾಲ್ಗುಣ ಚಾಮರಾಜನಗರ, ಗಣೇಶ್ ಪುತ್ತೂರು, ವೀರಭದ್ರಪ್ಪ ಸಾಲಿ, ಶಂಕರ ಬಿನ್ನಾಳ, ಜಾನಪದ ಕ್ಷೇತ್ರ: ಡಾ.ರಾಮೇಗೌಡ ಮಂಡ್ಯ, ವಿರೂಪಾಕ್ಷ ಸುಡುಗಾಡುಸಿದ್ದ ಬಳ್ಳಾರಿ, ಮಹೇಶ್ವರಿ ಹೊನ್ನಾಳಿ, ಶಿಕ್ಷಣ ಕ್ಷೇತ್ರ: ಪ್ರೊ.ಚಿಕ್ಕಬೋರಯ್ಯ, ಶ್ರೀಮತಿ ಅದ್ರ ಚಿಕ್ಕಮಗಳೂರು.
ಕೃಷಿ ಕ್ಷೇತ್ರ: ಬಸವರಾಜ ತಮ್ಮಾಕೆ ಬೀದರ್, ಕ್ರೀಡಾ ಕ್ಷೇತ್ರ: ತೇಜಸ್ವಿನಿ ಬಾಯಿ, ಡಾ.ಬಿ.ರಮೇಶ್, ನೇರಂಬಳ್ಳಿ ರಾಘವೇಂದ್ರ ರಾವ್ ಹೈದ್ರಾಬಾದ್, ಎಂ.ಬಿ.ನರಗುಂದ ಬೆಳಗಾವಿ, ಮಹಾಲಿಂಗಯ್ಯ ಗಣಾಚಾರಿ ಬಾಗಲಕೋಟೆ, ಪಾರ್ವತವ್ವ ಹೊಂಗಲ್ ಧಾರವಾಡ, ಯಕ್ಷಗಾನ ಕ್ಷೇತ್ರ: ವಿಠೋಬ ಹಮ್ಮಣ್ಣ ನಾಯಕ, ಚಿತ್ರಕಲೆ: ಡಾ.ಅನಿಲ್ ಕುಮಾರ್, ಕೆ.ಶಾಂತಯ್ಯ ರಾಯಚೂರು, ರಮೇಶ್ ತುಕಾರಾಮ್ ಅಥ್ಲೇಟ್, ಡಾ.ಪುರುಷೋತ್ತಮ ಬಿಳಿಮಲೆ, ಹರೀಶ್ ಶೆಟ್ಟಿ,
ಸಮಾಜಸೇವೆ: ಅಮ್ಜದ್ ಖಾನ್ ಹಾಸನ, ಡಾ.ಸಿದ್ದಯ್ಯ ಚಿತ್ರದುರ್ಗ, ಶಿವಾನಂದ ಮಾಗೇರಿ, ಬಾಲಚಂದ್ರ ನಾಕೋಡ್, ಕೆ.ಎನ್.ವೈಶಾಲಿ ಶಿವಮೊಗ್ಗ, ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಮೋಹನ್ ನಾಗಮ್ಮನವರ್, ಮಹಾತ್ಮಗಾಂಧಿ ಗ್ರಾಮೋದ್ಯೋಗ ಸಂಸ್ಥೆ ಬೆಳಗಾವಿ
0 comments:
Post a Comment