PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ. : ಮತಯಂತ್ರ ದೋಷದ ಕಾರಣದಿಂದ ಬಿಸರಳ್ಳಿಯ ಮತಗಟ್ಟೆ ಸಂಖ್ಯೆ ೫೩ ರಲ್ಲಿ ಸೆ. ೨೮ ರಂದು ಬುಧವಾರ ನಡೆದ ಮರು ಮತದಾನದಲ್ಲಿ ಒಟ್ಟಾರೆ ಶೇ. ೭೮. ೮೭ ರಷ್ಟು ಮತದಾನವಾಗಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
  ಉಪಚುನಾವಣೆಯ ಅಂಗವಾಗಿ ಸೆ. ೨೬ ರಂದು ನಡೆದ ಮತದಾನ ಸಂದರ್ಭದಲ್ಲಿ ಮತಯಂತ್ರ ದೋಷದ ಕಾರಣ ಮರು ಮತದಾನ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳು ಆದೇಶಿಸಿದ್ದರು.  ಪುರುಷ- ೩೪೭, ಮಹಿಳೆ- ೩೪೪ ಸೇರಿದಂತೆ ಒಟ್ಟು ೬೯೧ ಮತದಾರರನ್ನು ಹೊಂದಿದ್ದ ಬಿಸರಳ್ಳಿಯ ಮತಗಟ್ಟೆ ಸಂಖ್ಯೆ ೫೩ ರಲ್ಲಿ ಸೆ. ೨೮ ರಂದು ನಡೆದ ಮರು ಮತದಾನ ಸಂದರ್ಭದಲ್ಲಿ ಪುರುಷ- ೨೮೯, ಮಹಿಳೆ- ೨೫೬ ಸೇರಿದಂತೆ ಒಟ್ಟು ೫೪೫ ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಬಿಸರಳ್ಳಿ ಮತಗಟ್ಟೆಯನ್ನು ಹೊರತುಪಡಿಸಿ ಶೇ. ೭೧. ೪೯ ರಷ್ಟು ಮತದಾನವಾಗಿತ್ತು.  ಆದರೆ ಸದ್ಯ ಬಿಸರಳ್ಳಿಯಲ್ಲಿ ನಡೆದ ಮರು ಮತದಾನದ ನಂತರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಒಟ್ಟಾರೆ ಮತದಾನ ಶೇ. ೭೧. ೫೨ ರಷ್ಟು ದಾಖಲಾದಂತಾಗಿದೆ.  ಒಟ್ಟಾರೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಪುರುಷ- ೯೫೪೩೮, ಮಹಿಳೆ- ೯೨೭೧೭ ಸೇರಿದಂತೆ ೧೮೮೧೫೫ ಮತದಾರರ ಪೈಕಿ ಪುರುಷ- ೭೦೧೨೬, ಮಹಿಳೆ- ೬೪೪೪೧ ಸೇರಿದಂತೆ ಒಟ್ಟು ೧೩೪೫೬೭ ಮತದಾರರು ತಮ್ಮ ಸಂವಿಧಾನಾತ್ಮಕ ಹಕ್ಕು ಚಲಾಯಿಸಿದ್ದಾರೆ.

Advertisement

0 comments:

Post a Comment

 
Top