PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಮತದ ಬೆಲೆ ತಿಳಿಯದ, ಮತವನ್ನು ಮಾರಿಕೊಳ್ಳುವ ಜನರನ್ನು ಜಾಗೃತಗೊಳಿಸುವುದು. ಆಸೆ ಆಮೀಷಗಳಿಗೆ ಬಲಿಯಾಗಿ ತಮ್ಮ ಮತವನ್ನು ಮಾರಿಕೊಳ್ಳದಂತೆ ಮತದಾರನ ಮನವೊಲಿಸುವುದು ಬಹಳ ಮುಖ್ಯ ಎಂದು ಕನ್ನಡನೆಟ್.ಕಾಂ ಕವಿಸಮೂಹ ಬಳಗ ಅಭಿಪ್ರಾಯಪಟ್ಟಿದೆ. ಕನ್ನಡನೆಟ್.ಕಾಂ ಮತ್ತು ಕವಿಸಮೂಹ ಹಮ್ಮಿಕೊಂಡಿದ್ದ ೭೨ನೇ ಕವಿಸಮಯದಲ್ಲಿ ಮಾತನಾಡಿದ ಕವಿಬಳಗ -ಭ್ರಷ್ಟಾಚಾರವೇ ತುಂಬಿ ತುಳುಕುತ್ತಿರುವ ಇಂದಿನ ಸಮಾಜ ಮತ್ತು ರಾಜಕಾರಣಿಗಳ ಬಗ್ಗೆ ಜಾಗೃತಿ ಮೂಡಿಸಬೇಕಾದದ್ದು ಅನಿವಾರ್ಯ. ಚುನಾವಣೆ ಎಲ್ಲ ಭ್ರಷ್ಟಾಚಾರಕ್ಕೆ ಮೂಲ. ಮುಗ್ಧ ಮತದಾರ ಆಸೆ ಆಮಿಷಗಳಿಗೆ ಬಲಿಯಾಗಿ ತನ್ನ ಮತವನ್ನು ಮಾರಿಕೊಳ್ಳುತ್ತಿದ್ದಾನೆ.  ಪ್ರಜ್ಞಾವಂತರು, ಬುದ್ದಿಜೀವಿಗಳು ಮತದಾರರನ್ನು ಜಾಗೃತಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಡಲಾಯಿತು. ಮುಂದಿನ ದಿನಗಳಲ್ಲಿ ಕನ್ನಡನೆಟ್,ಕಾಂ ಕವಿಸಮೂಹದಿಂದ ಮತದಾರರ ಜಾಗೃತಿ ಕಾರ್‍ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಚುನಾವಣೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಕವನಗಳು ವಾಚನಗೊಂಡವು.  ಮಹೇಶ ಬಳ್ಳಾರಿ- ಹನಿಗವನ, ಎನ್.ಜಡೆಯಪ್ಪ- ಇದ್ದರೇನು ?, ಎಸ್.ಎಂ.ಕಂಬಾಳಿಮಠ- ಯಾರು ಹಿತವರು ನಿಮಗೆ?, ಲಲಿತಾ ಭಾವಿಕಟ್ಟಿ- ಕನಸುಗಾರ, ಶಾಂತಾದೇವಿ ಹಿರೇಮಠ- ಮಾಸದ ನಗು, ಲಕ್ಷ್ಮೀ- ವಿಮೋಚನೆ, ವಿಜಯಲಕ್ಷ್ಮೀ ಮಠದ- ಸ್ಫರ್ಧಾ ಕವಿತೆ, ಭಾವಗೀತೆ, ಪುಷ್ಪಲತಾ ಏಳಬಾವಿ- ಗಜಲ್, ನಟರಾಜ ಸವಡಿ- ಘಟೋದ್ಘಜನ ಉಪಹರ, ಬಸವರಾಜ ಸಂಕನಗೌಡರ-ಹನಿಗವನಗಳು, ಸಿರಾಜ್ ಬಿಸರಳ್ಳಿ- ನಿಮ್ಮಂತಾಗದವರು, ವಾಸುದೇವ ಕುಲಕರ್ಣಿ- ಕನಸು, ಸಂಕೋಚ, ಅಲ್ಲಮಪ್ರಭು ಬೆಟ್ಟದೂರು- ಎಲ್ಲಿರುವ ತಂದೆ ಮಾದ ಬಾರೋ ಕವನಗಳನ್ನು ವಾಚನ ಮಾಡಿದರು.
ಅಂದಣ್ಣ ಹಳ್ಳಿಗಿಡದ, ಕೆ.ಎಪ್,ಸಂಗಟಿ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಬಸವರಾಜ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ  ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top