ಕೊಪ್ಪಳ ಸೆ. : ಹುಲಗಿ ಗ್ರಾಮದಲ್ಲಿ ನೂರಾರು ಜನರಿಗೆ ಊಟ ಹಾಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ್ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದಾಗ್ಯೂ ಹುಲಿಗಿ ಗ್ರಾಮದಲ್ಲಿ ನೂರಾರು ಜನರಿಗೆ ಊಟ ಹಾಕಿಸಿರುವುದನ್ನು ಪತ್ತೆ ಹಚ್ಚಿದ ನೀತಿ ಸಂಹಿತೆ ನಿಗಾ ತಂಡ ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ್ ಹಿಟ್ನಾಳ್ ಅವರ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಹೊಸ ಕನಕಾಪುರ ತಾಂಡಾದಲ್ಲಿ ಪೊಲೀಸ್ ತಂಡ (ಅಬಕಾರಿ ಸೆಲ್) ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಲಕ್ಷ್ಮವ್ವ ಗಂಡ ಮಲ್ಲೇಶ್ ಚೌವ್ಹಾಣ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದೆಯಲ್ಲದೆ, ಸುಮಾರು ೧೮ ಲೀಟರ್ ಮದ್ಯ ಹಾಗೂ ೬. ೨೭ ಲೀ. ಬಿಯರ್ ವಶಪಡಿಸಿಕೊಂಡಿದೆ ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರಾದೇಶಿಕ ಸುದ್ದಿಗಳನ್ನು ನಿಯಮಿತವಾಗಿ ಪ್ರಸರಿಸುವ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನ್ನಡನೆಟ್.ಕಾಂ ಗೆ ಹಾಗೂ ಅದರ ರೂವಾರಿಯಾದ ತಮಗೆ ಅನಂತ ವಂದನೆಗಳು ಹಾಗೂ ಅಭಿನಂದನೆಗಳು.- ಮಲ್ಲಿಕಾರ್ಜುನ ಎಂ. ಕೊತಬಾಳ
ReplyDelete