ಬೆಂಗಳೂರು, ಆ.11: ರಾಜಭವನದಲ್ಲಿಂದು ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯೆಪುರ ಭಾಗವಹಿಸಿ ಎಲ್ಲರ ಅಚ್ಚರಿಗೆ ಕಾರಣರಾದರು. ಕಾಂಗ್ರೆಸ್-ಜೆಡಿಎಸ್‌ಗಳಿಂದ ಯಾರೇ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆದರೆ ಕಾಂಗ್ರೆಸ್‌ನ ಅಮರೇಗೌಡ ಬಯ್ಯೆಪುರ ಭಾಗವಹಿಸಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಅವರು ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಯ ಪಾಲಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಬಿಜೆಪಿ ಸರಕಾರ ಬಹುಮತ ಸಾಬೀತಿನ ವೇಳೆ ಬಯ್ಯಪುರ ಬಿಜೆಪಿ ಪರ ನಿಲ್ಲಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳೇ ತಿಳಿಸಿತ್ತು.
ಆದರೆ ಬಯ್ಯಪುರ ಅದನ್ನು ತಳ್ಳಿ ಹಾಕಿದ್ದರೂ, ಬಿಜೆಪಿ ಶಾಸಕರೊಂದಿಗೆ ಅವರು ಸಂಬಂಧ ಇಟ್ಟುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇಂದು ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಅದಕ್ಕೆ ಪುಷ್ಟಿ ನೀಡಿದ್ದಾರೆ.
0 comments:
Post a Comment