PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜು. : ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಲು ಕೇವಲ ಎರಡೂವರೆ ಅಡಿ ಬಾಕಿ ಇರುತ್ತದೆ. ಆದುದರಿಂದ ತುಂಗಭದ್ರಾ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಬಿಡುವ ಸಂಭವವಿದ್ದು, ನದಿ ಪಾತ್ರದ ಜನರು ಅಗತ್ಯ ಮುಂಜಾಗ್ರತೆ ಕೈಗೊಳ್ಳುವಂತೆ ತುಂಗಭದ್ರಾ ಜಲಾಶಯ ನೀರಾವರಿ ಕೇಂದ್ರ ವಲಯದ ಕಚೇರಿ ಪ್ರಕಟಣೆ ಎಚ್ಚರಿಕೆ ನೀಡಿದೆ.
ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ೪೭೦೦೦ ಕ್ಯೂಸೆಕ್ಸ್ ನಷ್ಟಿದ್ದು, ಹೊರಹರಿವು ೫೮೨೯ ಕ್ಯೂಸೆಕ್ಸ್ ಇದೆ. ಜಲಾಶಯದಲ್ಲಿ ಸಧ್ಯ ೯೧ ಟಿ.ಎಂ.ಸಿ. ನೀರಿದ್ದು, ಪರಿಷ್ಕೃತ ವರದಿಯಂತೆ ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ವರದಿಯಂತೆ ೧೦೦. ೮ ಟಿಎಂ.ಸಿ. ಎಂದು ನಿಗದಿಪಡಿಸಲಾಗಿದೆ. ಜಲಾಶಯದ ಇಂದಿನ ಮಟ್ಟ ೧೬೩೦. ೫೮ ಅಡಿ ಇರುತ್ತದೆ (ಗರಿಷ್ಟ ಮಟ್ಟ ೧೬೩೩ ಅಡಿ), ಜಲಾಶಯ ತುಂಬಲು ಇನ್ನು ಕೇವಲ ೨. ೫ ಅಡಿ ಮಾತ್ರ ಬಾಕಿ ಇದ್ದು, ಜಲಾಶಯದ ಕ್ರಸ್ಟ್ ಗೇಟ್‌ಗಳ ಮೂಲಕ ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡಲಾಗುವುದು. ನದಿ ಪಾತ್ರದಲ್ಲಿ ವಾಸಿಸುವವರು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಜಲಾಶಯ ನೀರಾವರಿ ಕೇಂದ್ರ ವಲಯ ಕಚೇರಿ ಪ್ರಕಟಣೆ ಎಚ್ಚರಿಕೆ ನೀಡಿದೆ.

Advertisement

0 comments:

Post a Comment

 
Top