ಕುಕನೂರು: 100 ಹಾಸಿಗೆ ಆಸ್ಪತ್ರೆ ಕಟ್ಟಡದ ಭೂಸ್ವಾಧೀನದ ಹಿಂದೆ ಮಾಜಿ ಶಾಸಕ ಬಸವರಾಜ್ ರಾಯರಡ್ಡಿ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ನವೀನ್ ಗುಳಗಣ್ಣನವರ್ ಆರೋಪಿಸಿದರು. ಅವರು ಕುಕನೂರಿನ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭೂಸ್ವಾದೀನದ ವಿರುದ್ದ ಧಾರವಾಡ ಹೈಕೋರ್ಟನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಇಷ್ಟರಲ್ಲಿಯೇ ತಡೆಯಾಜ್ಞೆ ದೊರೆಯುವ ನಿರೀಕ್ಷೆ ಇದೆ ಎಂದರು. ರೈತ ವಿರೋಧಿ ನಿಲುವು ಹೊಂದಿರುವ ಬಸವರಾಜ್ ರಾಯರಡ್ಡಿ ಭೂಸ್ವಾಧೀನದಲ್ಲಿ ತಮ್ಮ ಕೈವಾಡವಿಲ್ಲ ಎಂದಿದ್ದಾರೆ ಈ ಕುರಿತು ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮೊನ್ನೆ ನಡೆದ ಗಲಭೆಯಲ್ಲಿ ಬಂಧಿತರಾಗಿದ್ದ 10 ಮಹಿಳೆಯರು ಮತ್ತು 10 ರೈತರಿಗೆ ಜಾಮೀನಿನ ಮೇಲೆ ಕರೆತರಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಧ್ಯಾಮಣ್ಣ ಜಮಖಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೊನ್ನೆ ನಡೆದ ಗಲಭೆಯಲ್ಲಿ ಬಂಧಿತರಾಗಿದ್ದ 10 ಮಹಿಳೆಯರು ಮತ್ತು 10 ರೈತರಿಗೆ ಜಾಮೀನಿನ ಮೇಲೆ ಕರೆತರಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಧ್ಯಾಮಣ್ಣ ಜಮಖಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment