ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಮಳೆ ನಿನ್ನೆ ರಾತ್ರಿ ಸುರಿದಿದೆ. ಕೊಪ್ಪಳದಲ್ಲಿ ಸುರಿದ ಭಾರಿ ಮಳೆಗೆ ಬಸ್ ಎದುರಿನ ಜಾಗೆ ಕೆರೆಯಂತಾಗಿತ್ತು. ಆಶೀರ್ವಾದ ಹೊಟೆಲ್ ಪಕ್ಕದ ದೊಡ್ಡ ಗಟಾರ್ ತುಂಬಿ ಅದರ ಮೇಲಿನಿಂದ ನೀರು ಹರಿಯುತ್ತಿತ್ತು. ಎರಡರಿಂದ ಮೂರು ತಾಸು ಸಂಚಾರಕ್ಕೆ ವಿಪರೀತ ತೊಂದರೆಯಾಯಿತು. ಬಸ್ ಸ್ಟಾಂಡ್ ನಲ್ಲಿಯ ಜನ ಅಲ್ಲಿಯೇ ಉಳಿಯಬೇಕಾಯಿತು. ದ್ವಿ ಚಕ್ರ ವಾಹನಗಳಂತೂ ಮುಂದಕ್ಕೆ ಸಾಗಲೇ ಇಲ್ಲ. ನಗರದೆಲ್ಲೆಡೆ ಚರಂಡಿ, ರಸ್ತೆಗಳು ನೀರಲ್ಲಿ ಮುಳುಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
Home
»
»Unlabelled
» ಕೊಪ್ಪಳದಲ್ಲಿ ಭರ್ಜರಿ ಮಳೆ
Subscribe to:
Post Comments (Atom)
0 comments:
Post a Comment