ಕೊಪ್ಪಳ ಜು. : ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಯೋಜನೆಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಕೊಪ್ಪಳ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು, ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಪುನಃ ಕಾಯಕಲ್ಪ ನೀಡಲಾಗುತ್ತಿದೆ. ಈ ಭಾಗದ ರೈತರ ದಶಕಗಳ ಕನಸಾಗಿ ಉಳಿದಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ಕಾಲುವೆ ಕಾಮಗಾರಿಗಾಗಿ ಸರ್ಕಾರ ಸುಮಾರು ೨೮ ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆಗಡೆ ಕ್ರಮ ಕೈಗೊಂಡಿದೆ. ಕಾಮಗಾರಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜು. ೧೧ ರಂದು ಕಾಮಗಾರಿಗೆ ಚಾಲನೆ ದೊರೆಯಲಿದೆ. ಕೊಪ್ಪಳ ಭಾಗದಲ್ಲಿ ಒಟ್ಟು ೪೮ ಕಿ.ಮೀ. ಕಾಲುವೆ ನಿರ್ಮಾಣವಾಗಲಿದ್ದು, ಇದರಿಂದಾರಿ ಪದೇ ಪದೇ ಬರದ ಪರಿಸ್ಥಿತಿ ಎದುರಿಸುತ್ತಿದ್ದ ಈ ಭಾಗದ ರೈತರ ೪೦೧೮೦ ಎಕರೆ ಭೂಮಿ ನೀರಾವರಿಗೆ ಒಳಪಡಲಿದ್ದು, ರೈತರ ಬಾಳು ಹಸನಾಗಲಿದೆ. ೨೦೧೧-೧೨ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಕೊಪ್ಪಳ ಉಪ-ವಿಭಾಗದಿಂದ ಕೊಪ್ಪಳ ತಾಲೂಕಿನಲ್ಲಿ ಒಟ್ಟು ೩೩. ೬೮ ಕೋಟಿ ರೂ. ಅನುದಾನ ದೊರಕಿಸಲಾಗಿದ್ದು, ಇದರಲ್ಲಿ ೨೩ ರಸ್ತೆ ಕಾಮಗಾರಿಗಳು ಹಾಗೂ ೬೩ ಹೈಮಾಸ್ಟ್ ದೀಪ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳ ಕಾರ್ಯ ಪ್ರಾರಂಭವಾಗಲಿದೆ. ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಕ್ಷೇತ್ರದ ಹಲವು ದೇವಾಲಯಗಳಿಗೆ ಒಟ್ಟು ೧೬೫ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಹಲವು ರಸ್ತೆಗಳ ಸುಧಾರಣೆ, ಕಾಮಗಾರಿಗಳಿಗೆ ೩೦ ಕೋಟಿ ರೂ. ಅನುದಾನ ಹರಿದುಬಂದಿದೆ. ಗ್ರಾಮಿಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಪ್ರದೇಶದ ರಸ್ತೆ ಕಾಮಗಾರಿಗಳಿಗೆ ೬ ಕೋಟಿ, ಪಟ್ಟಣ ಮತ್ತು ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ೧೬೮. ೭೫ ಲಕ್ಷ ರೂ., ಪ.ಜಾತಿ/ಪ.ಪಂಗಡದ ಉಪಯೋಜನೆಯಡಿ ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ೪೦ ಲಕ್ಷ ರೂ., ಕೊಪ್ಪಳದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ೬ ಕೋಟಿ, ವಾಲ್ಮೀಕಿ ಭವನ ನಿರ್ಮಾಣಕ್ಕೆ ೧ ಕೋಟಿ, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ೧೪೩ ಲಕ್ಷ, ಕೊಪ್ಪಳದ ಐತಿಹಾಸಿಕ ಹುಲಿಕೆರೆ ಅಭಿವೃದ್ಧಿಗೆ ೧ ಕೋಟಿ, ಪ.ಜಾತಿ/ಪ.ಪಂಗಡದ ಜನಾಂಗದವರಿಗೆ ಸಾಮೂಹಿಕ ನೀರಾವರಿ ಯೋಜನೆಗಾಗಿ ೧೩೦ ಲಕ್ಷ, ಶ್ರೀ ಗವಿಸಿದ್ದೇಶ್ವರ ಯಾತ್ರಿ ನಿವಾಸಕ್ಕಾಗಿ ೫ ಕೋಟಿ, ಕೊಪ್ಪಳ-ಭಾಗ್ಯನಗರ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ೫೪ ಕೋಟಿ, ಜಲಸಂಪನ್ಮೂಲ ಇಲಾಖೆಯಿಂದ ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನ ಕಾಮಗಾರಿಗಳಿಗಾಗಿ ೯೮ ಲಕ್ಷ, ಗಿಣಿಗೇರಾ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿಗಾಗಿ ೧ ಕೋಟಿ, ಪರಿಶಿಷ್ಟ ಜಾತಿ/ ಪ.ಪಂಗಡದ ಜನಾಂಗಕ್ಕೆ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಸೌಲಭ್ಯ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ನೋಂದಾಯಿತ ಹಮಾಲರಿಗೆ ನಗರಪ್ರದೇಶದಲ್ಲಿ ೮೧೭ ಮನೆಗಳ ನಿರ್ಮಾಣಕ್ಕಾಗಿ ೧. ೪೫ ಕೋಟಿ, ನಗರದ ಕಡುಬಡವರಿಗೆ ೧೨೦೦ ಫಲಾನುಭವಿಗಳಿಗೆ ಆಶ್ರಯ ಮನೆ ನಿರ್ಮಾಣಕ್ಕಾಗಿ ೧. ೩೦ ಕೋಟಿ, ರೂ. ಅನುದಾನ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ಕಡುಬಡವರಿಗೆ ೬೦೦೦ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಕ್ರಮ ಜರುಗಿಸಲಾಗಿದೆ. ಕೊಪ್ಪಳ-ಭಾಗ್ಯನಗರದ ನಿವಾಸಿಗಳಿಗೆ ಶುದ್ಧಿ ಕುಡಿಯುವ ನೀರು ಸರಬರಾಜಿಗಾಗಿ ಸರ್ಕಾರ ೫೪ ಕೋಟಿ ರೂ.ಗಳ ಕಾಮಗಾರಿಗೆ ಮಂಜೂರಾತಿ ನೀಡಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

0 comments:
Post a Comment